SCAM | ನಕಲಿ ಐವಿಆರ್‌ ಕರೆ ಸ್ವೀಕರಿಸಿ ಬರೋಬ್ಬರಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಹಿಳೆಯೊಬ್ಬರು ವಂಚನೆಗೆ ಒಳಗಾಗಿ ಬರೋಬ್ಬರಿ 2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಹೌದು ಅವರು ನಕಲಿ ಐವಿಆರ್‌ ಕರೆ ಸ್ವೀಕರಿಸಿ 1 ನಂಬರ್‌ ಒತ್ತಿದ್ದಷ್ಟೇ, ಅವರ ಬ್ಯಾಂಕ್‌ ಖಾತೆಯಲ್ಲಿದ್ದ 2 ಲಕ್ಷ ರೂ. ಹಣ ಮಂಗಮಾಯವಾಗಿದೆ.

ಬೆಂಗಳೂರಿನ ಮಹಿಳೆಯೊಬ್ಬರು ನಕಲಿ ಐವಿಆರ್‌ (ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌) ಕರೆ ಸ್ವೀಕರಿಸಿ 2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ನಿಂದ ಬಂದಂತಹ ಕರೆಯಿರಬಹುದೆಂದು ಫೋನ್ ರಿಸೀವ್‌ ಮಾಡಿದ ಮಹಿಳೆ, ಕರೆಯ ಮೂಲಕ ಬಂದಂತಹ ಸೂಚನೆಗಳನ್ನು ಅನುಸರಿಸಿ ಕೊನೆಗೆ ನಂಬರ್‌ 1 ನ್ನು ಒತ್ತಿ ಬ್ಯಾಂಕ್‌ ಖಾತೆಯಲ್ಲಿದ್ದ 2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ಜನವರಿ 20 ರಂದು ಮಧ್ಯಾಹ್ನ ಸುಮಾರು 3.55 ಕ್ಕೆ ಮಹಿಳೆ ಈ ನಕಲಿ ಕರೆಯನ್ನು ಸ್ವೀಕರಿಸಿದ್ದು, ಕರೆಯಲ್ಲಿ ನಿಮ್ಮ ಖಾತೆಯಿಂದ ಇನ್ನೊಂದು ಖಾತೆಗೆ ಎರಡು ಲಕ್ಷ ರೂ, ಹಣವನ್ನು ವರ್ಗಾಯಿಸಲಾಗುತ್ತಿದೆ, ಈ ವಹಿವಾಟನ್ನು ಮುಂದುವರೆಸಲು 3 ನ್ನು ಒತ್ತಿ, ಇದು ಬೇಡ ಅಂತಿದ್ದರೆ 1 ನ್ನು ಒತ್ತಿ ಎಂದು ಸೂಚನೆಯನ್ನು ನೀಡಲಾಗಿದೆ. ಇದು ಬ್ಯಾಂಕ್‌ನವರದ್ದೇ ಕರೆಯೆಂದು ನಂಬಿದ ಮಹಿಳೆ ಫೋನ್‌ ಕರೆಯಲ್ಲಿ ನಂಬರ್‌ 1 ನ್ನು ಒತ್ತಿ ಬ್ಯಾಂಕ್‌ ಖಾತೆಯಲ್ಲಿದ್ದ 2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಬ್ಯಾಂಕ್‌ ಖಾತೆಯಿಂದ 2 ಲಕ್ಷ ರೂ. ಮಂಗಮಾಯವಾಗಿರುವುದನ್ನು ಕಂಡ ಮಹಿಳೆಗೆ ತಾನು ವಂಚನೆಗೆ ಒಳಗಾಗಿದ್ದೇನೆ ಎಂಬುದು ಗೊತ್ತಾಗಿದೆ.

ತಕ್ಷಣ ಬ್ಯಾಂಕ್‌ಗೆ ಬಂದ ಮಹಿಳೆ ಅಧಿಕಾರಿಗಳ ಬಳಿ ದೂರನ್ನು ನೀಡಿದ್ದು, ನಂತರ ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಐಪಿಸಿ ಸೆಕ್ಷನ್‌ 318 ರ ಅಡಿಯಲ್ಲಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!