ಡ್ರಗ್ಸ್​ ಜೊತೆ ಸಿಕ್ಕಿಬಿದ್ದ ಮಹಿಳಾ ಪೊಲೀಸ್: 2 ಕೋಟಿ ಮೌಲ್ಯದ ಹೆರಾಯಿನ್‌ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್​ನ ಪೊಲೀಸ್ ಮಹಿಳಾ ಅಧಿಕಾರಿ ಬಳಿ ಸುಮಾರು 17.71 ಗ್ರಾಂನಷ್ಟು ಹೆರಾಯಿನ್ ಡ್ರಗ್ಸ್ ಪತ್ತೆಯಾಗಿದೆ. ಪೊಲೀಸ್ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬಳಿ ಇದ್ದ ಡ್ರಗ್ಸ್ ವಶಪಡಿಸಿಕೊಂಡು, ಅಮನ್​ದೀಪ್ ಕೌರ್​ರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮಹಿಳಾ ಅಧಿಕಾರಿ ಪಂಜಾಬ್​ನ ಆ್ಯಂಟಿ ನಾಕ್ರೊಟಿಕ್ಸ್​ ಟಾಸ್ಕ್​ ಫೋರ್ಸ್​ನ ಸಿಬ್ಬಂದಿಯಾಗಿದ್ದರು ಎಂದು ತಿಳಿದು ಬಂದಿದೆ. ಬಾದಲ್ ಫ್ಲೈ ಓವರ್ ಬಳಿ ಅವರ ಎಸ್​​ಯು ಮಹಿಂದ್ರಾ ಥಾರ್​ನಲ್ಲಿ ಸುಮಾರು 17.7 ಗ್ರಾಂನಷ್ಟು ಮಾದಕದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಬತಿಂದಾದ ಡಿಎಸ್​ಪಿ ಹರ್ಬನ್ ಸಿಂಗ್ ಹೇಳಿದ್ದಾರೆ. ಜೊತೆಗೆ ಮಹಿಳಾ ಸಿಇಬನ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಐಜಿಪಿ ಸುಖಚೈನ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಈಗಾಗಲೇ ಮಹಿಳಾ ಅಧಿಕಾರಿಯನ್ನು ಆಕೆಯ ಸ್ಥಾನದಿಂದ ವಜಾಗೊಳಿಸಲಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಪಂಜಾಬ್​​ನ ಮುಖ್ಯಮಂತ್ರಿ ಭಗವಂತ್ ಮಾನ್, ಈ ರೀತಿಯಾಗಿ ಅಕ್ರಮ ವ್ಯವಹಾರಗಳ್ಲಿ ತೊಡಗುವ ಯಾವುದೇ ಅಧಿಕಾರಿಗಳಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ. ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!