ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿ ಮೂಲದ ಮಹಿಳೆಯೂ ಕೇವಲ ಒಂದೇ ನಿಮಿಷದಲ್ಲಿ ಅತಿ ಹೆಚ್ಚು ಕಲ್ಲಂಗಡಿಗಳನ್ನು ತನ್ನ ತೊಡೆಯಿಂದ ಪುಡಿಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಈ ಮಹಿಳೆಯ ಹೆಸರು ಗೊಜ್ಡೆ ಡೋಗನ್. ಕಳೆದ ವರ್ಷ ಫೆ.5 ರಂದು ಇಟಲಿಯ ಮಿಲನ್‌ನಲ್ಲಿ ಲೊ ಶೋ ಡೀ ದಾಖಲೆಗಾಗಿ ನಿಗದಿಪಡಿಸಿದ ಸಮಯದೊಳಗೆ ಗೊಜ್ಡೆ ಡೋಗನ್ ಐದು ಕಲ್ಲಂಗಡಿಗಳನ್ನು ಪುಡಿಮಾಡ ಸೈ ಎನಿಸಿಕೊಂಡಿದ್ದಳು.
ಆದರೆ ಇತ್ತೀಚೆಗಷ್ಟೇ ಈ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮಹಿಳೆಯ ಸಾಧನೆಯ ವಿಡಿಯೋವೊಂದು ಹಂಚಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ, ಒಂದು ನಿಮಿಷದಲ್ಲಿ ತನ್ನ ತೊಡೆಗಳಿಂದ ಕಲ್ಲಂಗಡಿಗಳನ್ನು ಪುಡಿಮಾಡಿದರು ಎಂದು ಶೀರ್ಷಿಕೆ ನೀಡಲಾಗಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಗಿನ್ನಿಸ್ ದಾಖಲೆ ನಿರ್ಮಿಸಿದ ಗೊಜ್ಡೆ ಡೋಗನ್ ಅವರು ಇದರ ಒಂದೆರಡು ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈಗ ನನ್ನ ಹೆಸರು ಬುಕ್ ಆಫ್ ರೆಕಾರ್ಡ್ಸ್‌ನಲ್ಲಿದೆ. ಕೇವಲ ಕಾಲುಗಳನ್ನು ಬಳಸಿ ಒಂದು ನಿಮಿಷದಲ್ಲಿ ಹೆಚ್ಚಿನ ಕಲ್ಲಂಗಡಿಗಳನ್ನು ಮುರಿದ ದಾಖಲೆಯನ್ನು ನಾನು ಹೊಂದಿದ್ದೇನೆ. ಒಂದು ನಿಮಿಷದಲ್ಲಿ ಇದನ್ನು ಮಾಡುವುದು ಸುಲಭವಲ್ಲ ಎಂದು ತಮ್ಮ ಗೆಲುವಿನ ಬಗ್ಗೆ ಖುಷಿಯಿಂದ ಪ್ರತಿಕ್ರಿಯಿಸಿದ್ದಾಳೆ.
Most watermelons crushed with the thighs in one minute (female) – 5 achieved by Gözde Doğan 🇹🇷 pic.twitter.com/X6jyAJQCGi
— Guinness World Records (@GWR) January 17, 2025