ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮನೆ ಬಾಡಿಗೆ ಹಣ ಕೇಳಿದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಮುನೇಶ್ವರ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮುನೇಶ್ವರ ನಗರದ ನಿವಾಸಿ ಶ್ರೀದೇವಿ ತೀವ್ರ ಹಲ್ಲೆಗೊಳಗಾಗಿದ್ದು, ಈಕೆ ನೀಡಿದ ದೂರಿನ ಮೇರೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಜೀರ್, ಈತನ ಪುತ್ರ ಸದ್ದಾಂ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ‌.

ಫಯಾಜ್ ಎಂಬುವವರ ಕಟ್ಟಡದಲ್ಲೇ ಶ್ರೀದೇವಿ ಎಂಬ ಮಹಿಳೆ ಬಾಡಿಗೆಗೆ ಇದ್ದರು. ಫಯಾಜ್ ಕುಟುಂಬ ವಿದೇಶದಲ್ಲಿರೋದರಿಂದ ಶ್ರೀದೇವಿಗೆ ಉಸ್ತುವಾರಿ ನೀಡಿದ್ದರು. ಹೀಗಾಗಿ ಇಡೀ ಕಟ್ಟಡದ ಬಾಡಿಗೆ ಹಣ ಪಡೆದು ವಿದೇಶದಲ್ಲಿದ್ದ ಫಯಾಜ್​ಗೆ ಶ್ರೀದೇವಿ ನೀಡುತ್ತಿದ್ದರು.

ಶ್ರೀದೇವಿ ವಾಸವಾಗಿದ್ದ ಬಿಲ್ಡಿಂಗ್​ನಲ್ಲೇ ವಾಸವಾಗಿದ್ದ ನಜೀರ್ ಕುಟುಂಬಕ್ಕೆ ಬಾಡಿಗೆ ಹಣ ನೀಡಲು ಕೇಳಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ, ಆಗ ಸದ್ದಾಂ ಎಂಬಾತ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ಗಾಯಗೊಂಡ ಶ್ರೀದೇವಿ ಕುಸಿದುಬಿದ್ದಿರುವುದನ್ನು ಕಂಡು ಸ್ಥಳದಿಂದ ಅಪ್ಪ-ಮಗ ಪರಾರಿಯಾಗಿದ್ದರು. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶ್ರೀದೇವಿ ಪೊಲೀಸರಿಗೆ ದೂರು ನೀಡಿದ್ದಾಳೆ.‌ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಜಾಮೀನಿನ ಮೇಲೆ ಆರೋಪಿಗಳು ಬಿಡುಗಡೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!