ಭಾವಿಪತಿಯ ಕೈಗೆ ಕೋಳ ತೊಡಿಸಿ ಜೈಲಿಗೆ ಕಳುಹಿಸಿದ ಮಹಿಳಾ ಸಬ್ ಇನ್ಸ್ ಪೆಕ್ಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವರನ ಕೈಯಿಂದ ಹಾರ ಹಾಕಿಸಿಕೊಂಡು ತಾಳಿ ಕಟ್ಟಿಸಿಕೊಳ್ಳುವ ಬೇಕಾದ ವಧು ಇಲ್ಲಿ ಆತನ ಕೈ ಗೆ ಕೋಳ ತೊಡಿಸಿ ಜೈಲಿಗೆ ಕಳುಹಿಸಿದ್ದಾಳೆ.
ಹೌದು,ಈ ಘಟನೆ ನಡೆದಿದ್ದು ಅಸ್ಸಾಂನಲ್ಲಿ. ಆಕೆ ಭುಜದ ಮೇಲೆ ಡಬಲ್ ಸ್ಟಾರ್ ಇರುವ, ಖಾಕಿ ಧರಿಸಿರೋ ಸಬ್ ಇನ್ಸ್ ಪೆಕ್ಟರ್. ನವೆಂಬರ್ ನಲ್ಲಿ ಮದುವೆಯಾಗುವ ಕನಸು ಕಂಡಿದ್ದರು. ಆದರೆ ಆಕೆ ಆತನನ್ನೇ ಜೈಲಿಗೆ ಕಳುಸಿದ್ದಾಳೆ.
ಆತನ ಹೆಸರೇ ರಾಣಾ ಪೊಗಾಗ್. ಆಕೆ ಕಮ್ ಸಬ್ ಇನ್ಸ್ ಪೆಕ್ಟರ್ ಜುನ್ಮೋನಿ ರಾಭಾ.
ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‌ಜಿಸಿ) ನಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ರಾಣಾ ಪೊಗಾಗ್ ಹಲವರಿಗೆ ವಂಚಿಸಿದ್ದ. ಈ ವಿಚಾರ ಗೊತ್ತಿಲ್ಲದ ಸಬ್ ಇನ್ಸ್ ಪೆಕ್ಟರ್ ನಾಗಾವ್ ಜಿಲ್ಲೆಯ ಜುನ್ಮೋನಿ ರಾಭಾ ಕಳೆದ ಅಕ್ಟೋಬರ್ ನಲ್ಲಿ ಆತನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದೀಗ ಈತನ ವಂಚನೆ ಬಯಲಾಗಿದ್ದು, ಸ್ವತಃ ಭಾವಿ ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ.
ರಾಣಾ ಪೊಗಾಗ್ ತಾನು ಅಸ್ಸಾಂನಲ್ಲಿ ಒಎನ್‌ಜಿಸಿ ಅಧಿಕಾರಿಯಾಗಿದ್ದು, ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜನರ ಬಳಿ ಹಣ ಕೇಳುತ್ತಿದ್ದ. ಪೋಲೀಸರ ಪ್ರಕಾರ ಕೋಟ್ಯಂತರ ರೂಪಾಯಿ ವಂಚನೆ ಮಾಡಿರೋದು ಬಯಲಾಗಿದೆ.
ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಅವರಿಗೆ ತಾನೊಬ್ಬ ಒಎನ್‌ಜಿಸಿ ಅಧಿಕಾರಿ ಎಂದು ಈತ ಪರಿಚಯಿಸಿಕೊಂಡಿದ್ದನಂತೆ. ಆದರೆ ಆತ ದೊಡ್ಡ ವಂಚಕ ಎಂದು ತಿಳಿದ ತಕ್ಷಣ ಎಫ್‌ಐಆರ್ ದಾಖಲಿಸಿದ್ದೇನೆ.
ನಾನು ರಾಣಾ ಪೊಗಾಗ್ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಒಎನ್ ಜಿಸಿಯ ಕೆಲವು ನಕಲಿ ಸೀಲುಗಳು ಮತ್ತು ದಾಖಲೆಗಳಿದ್ದವು. ಅವುಗಳನ್ನು ವಶಪಡಿಸಿಕೊಂಡ ನಂತರ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಿದ್ದೇವೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಣಾನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!