Tuesday, June 28, 2022

Latest Posts

ಹಗರಿಬೊಮ್ಮನಹಳ್ಳಿ: ಸಂಘ ಶಿಕ್ಷಾ ವರ್ಗ ಸಮಾರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತಗಳ ಪ್ರಥಮ ಮತ್ತು ದ್ವಿತೀಯ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭ ಕಾರ್ಯಕ್ರಮ ಇಂದು ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ನಡೆಯಿತು.
ಉದ್ಯಮಿ ರವೀಂದ್ರ ವೆಂಕಟೇಶ ಗುಮಾಸ್ತೆ ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಸಮಾರೋಪ ಭಾಷಣ ಮಾಡಿದರು. ದ್ವಿತೀಯ ವರ್ಷದ ವರ್ಗಾಧಿಕಾರಿಗಳಾದ ಬಸವರಾಜ ಡಂಬಳ, ಪ್ರಥಮ ವರ್ಷದ ವರ್ಗದ ವರ್ಗಾಧಿಕಾರಿಗಳಾದ ಡಾ. ಸುರೇಶ್ ಹೆಗಡೆ ಉಪಸ್ಥಿತರಿದ್ದರು.


ಪ್ರಥಮ ವರ್ಷದ ವರ್ಗದಲ್ಲಿ 261, ದ್ವಿತೀಯ ವರ್ಷದ ವರ್ಗದಲ್ಲಿ 203 ಶಿಕ್ಷಾರ್ಥಿಗಳು ಭಾಗವಹಿಸಿದ್ದರು.
ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸಹಸರಕಾರ್ಯವಾಹ ಡಾ. ಮನಮೋಹನ್ ವೈದ್ಯ, ಅಖಿಲ ಭಾರತೀಯ ಸಂಪರ್ಕ ಪ್ರಮುಖ ಶ್ರೀ ರಾಮ್ ಲಾಲ್ ವರ್ಗಕ್ಕೆ ಭೇಟಿ ನೀಡಿದ್ದರು.


ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss