ಗಂಡನ ಮೇಲೆ ಅನೈತಿಕ ಸಂಬಂಧದ ಅನುಮಾನ: ಆತನ ಸ್ನೇಹಿತೆ ಮೇಲೆ ಅತ್ಯಾಚಾರ ಮಾಡಿ ವೀಡಿಯೋ ಮಾಡಲು ಗೂಂಡಾಗಳನ್ನು ಕಳಿಸಿದ ಪತ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಗಂಡ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಆತನ ಸ್ನೇಹಿತೆ ಮೇಲೆ ಅತ್ಯಾಚಾರ ನಡೆಸಿ ಅದನ್ನು ವೀಡಿಯೋ ಮಾಡಲು ಗೂಂಡಾಗಳನ್ನು ಸ್ವತಃ ಆತನ ಹೆಂಡತಿಯೇ ಕಳುಹಿಸಿದ ಘಟನೆ ಹೈದರಾಬಾದ್‌ ನಲ್ಲಿ ವರದಿಯಾಗಿದೆ.

ಪೋಲೀಸರು ನೀಡಿದ ಮಾಹಿತಿಯ ಪ್ರಕಾರ ಪಶ್ಚಿಮ ಹೈದರಾಬಾದ್‌ನ ಉಪನಗರವಾದ ಕೊಂಡಾಪುರದ ಶ್ರೀರಾಮನಗರ ಕಾಲೋನಿಯ ನಿವಾಸಿಯಾದ ಪತ್ನಿ ಗಾಯತ್ರಿ ಎಂಬಾಕೆಯು ಗಂಡ ಶ್ರಿಕಾಂತ್‌ ಅವನ ಸ್ನೇಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಈ ಕೃತ್ಯ ಎಸಗಿದ್ದಾಳೆ.

ಶ್ರೀಕಾಂತ್‌ ಮತ್ತು ಸಂತ್ರಸ್ತೆ ಇಬ್ಬರೂ ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸುತ್ತಿದ್ದರು. ಶ್ರೀಕಾಂತ್‌ ಆಗಾಗ ಅವನ ಸ್ನೇಹಿತೆಯ ಮನೆಗೆ ಹೋಗುತ್ತಿದ್ದ. 2021 ಸೆಪ್ಟೆಂಬರ್‌ ನಿಂದ ಅಕ್ಟೋಬರ್‌ 2022ರ ವರೆಗೆ ಅಲ್ಲೇ ಇದ್ದ. ಇದರಿಂದ ಗಂಡ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಭಾವಿಸಿ ಆತನ ಪತ್ನಿ ಗಾಯತ್ರಿ ತನ್ನ ಗಂಡನ ಸ್ನೇಹಿತೆಯ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದಾಳೆ.

ಈ ಹಿನ್ನೆಲೆಯಲ್ಲಿ ಐವರು ಗೂಂಡಾಗಳೊಂದಿಗೆ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದ ಆಕೆ ಗೂಂಡಾಗಳ ಬಳಿ ಸಾಮೂಹಿಕ ಅತ್ಯಾಚಾರ ಮಾಡುವಂತೆ ಹೇಳಿದ್ದಾಳೆ ಮತ್ತು ಅದನ್ನು ವಿಡಿಯೋ ಮಾಡಲು ಸೂಚಿಸಿದ್ದಾಳೆ. ತಾನು ಗಾಯತ್ರಿಯ ಮನೆಗೆ ಹೋದಾಗ ಆಕೆಯ ಐವರು ಗೂಂಡಾಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ ವಿಡಿಯೋ ತೆಗೆದಿದ್ದಾರೆ. ಈ ವಿಷಯವನ್ನು ಪೋಲೀಸರಿಗೆ ತಿಳಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾಳೆ.

ದೂರು ದಾಖಲಿಸಿಕೊಂಡ ಪೊಲೀಸರು ಪ್ರಮುಖ ಆರೋಪಿ ಗಾಯತ್ರಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!