ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸಂದರ್ಶನ ನೆಪದಲ್ಲಿ ಕರೆದು ಮಹಿಳಾ ಟೆಕ್ಕಿಗೆ ಅತ್ಯಾಚಾರವೆಸಗಿರುವ ಘಟನೆ ಗುರುಗ್ರಾಮ್ ಮಾಲ್ ನ ನೆಲಮಾಳಿಗೆಯಲ್ಲಿ ನಡೆದಿದೆ.
ಇಂಜಿನಿಯರಿಂಗ್ ಪದವೀಧರರಾದ 27 ವರ್ಷದ ಮಹಿಳಾ ಟೆಕ್ಕಿಗೆ ಸಂದರ್ಶನಕ್ಕೆಂದು ಕರೆದು, ಮಾಲ್ ನ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆ ಸೆಕ್ಟರ್ 51ರಲ್ಲಿ ಎಫ್‌ಐಆರ್ ದಾಖಲಾಗಿದೆ. ಡಿಎಲ್‌ಎಫ್ ಪ್ರದೇಶದ ನಿವಾಸಿಯಾಗಿರುವ ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಆಕೆ ಆನ್‌ಲೈನ್‌ನಲ್ಲಿ ಕೆಲಸ ಹುಡುಕುತ್ತಿದ್ದಳು ಮತ್ತು ತನ್ನನ್ನು ತುಷಾರ್ ಶರ್ಮಾ ಎಂದು ಗುರುತಿಸಿಕೊಂಡ ಆರೋಪಿಯ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡಿದ್ದಾಳೆ. ಶನಿವಾರ ಸಹಾರಾ ಮಾಲ್‌ನಲ್ಲಿ ಸಂದರ್ಶನದ ನೆಪದಲ್ಲಿ ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಕರೆಸಿದ್ದರು ಮತ್ತು ಆ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328 (ವಿಷದ ಮೂಲಕ ನೋವುಂಟುಮಾಡುವುದು), 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ತುಷಾರ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.