ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್‌ಪೋರ್ಟ್‌ನಲ್ಲಿ ನ್ಯೂ ಸೆನ್ಸ್ ಕ್ರಿಯೇಟ್ ಮಾಡುವವರ ಸಂಖ್ಯೆ ಬರುಬರುತ್ತಾ ಹೆಚ್ಚಾಗುತ್ತಿದೆ. ಇಲ್ಲೊಬ್ಬ ಮಹಿಳೆ ಏರ್‌ಪೋರ್ಟ್‌ನಲ್ಲಿ ನಗ್ನವಾಗಿ ಓಡಾಡಿದ್ದಲ್ಲದೇ ಒಬ್ಬರಿಗೆ ಇರಿದಿದ್ದಾಳೆ. ಇನ್ನಿಬ್ಬರಿಗೆ ಕಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ.
ಬೆತ್ತಲಾಗಿ ನಾನು ಶುಕ್ರ ದೇವತೆ ಎಂದು ಚೀರಾಡುತ್ತಾ, ಎಲ್ಲರ ಮೇಲೆ ನೀರೆರಚುತ್ತಾ ಅಸಭ್ಯ ವರ್ತನೆಯನ್ನು ತೋರಿದ್ದಾಳೆ. ಅಷ್ಟೇ ಅಲ್ಲದೆ ಆಕೆಯನ್ನು ನಿಯಂತ್ರಿಸಲು ಬಂದ ಭದ್ರತಾ ಸಿಬ್ಬಂದಿಗಳ ಮೇಲೆ ಆಕೆ ಹಲ್ಲೆ ನಡೆಸಿದ್ದು, ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿರುವ ಡಲ್ಲಾಸ್ ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬಟ್ಟೆ ಬಿಚ್ಚಿ ಬೆತ್ತಲಾದ ಮಹಿಳೆ ಹಿಂಸಾತ್ಮಕವಾಗಿ ವರ್ತಿಸಿದ್ದಾಳೆ. ಹೌದು ಆಕೆ ನಾನು ಶುಕ್ರ ದೇವತೆ ಎಂದು ಚೀರಾಡುತ್ತಾ ಭದ್ರತಾ ಸಿಬ್ಬಂದಿಗಳಿಗೆ ಪೆನ್ಸಿಲ್‌ನಿಂದ ಇರಿದು, ರೆಸ್ಟೋರೆಂಟ್ ಸಿಬ್ಬಂದಿಗೆ ಕಚ್ಚಿ ರಾದ್ಧಾಂತ ಸೃಷ್ಟಿಸಿದ್ದಾಳೆ.