ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಗುಣಿ ಅಗ್ರಹಾರ ಬಳಿ ಮಹಿಳೆಯೊಬ್ಬರು ತಮ್ಮ ಮನೆ ಬಳಿ ಮೇಯಲು ಬಂದಿದ್ದ ಹಸುಗಳ ಮೇಲೆ ಆಸಿಡ್ ಎರಚಿದ್ದಾರೆ.
ಜೋಸೆಫ್ ಗ್ರೇಸ್ ಎನ್ನುವವರು ಒಟ್ಟಾರೆ 18 ಹಸುಗಳ ಮೈಮೇಲೆ ಆಸಿಡ್ ಎರಚಿದ್ದಾರೆ. ಇದರಿಂದ ಹಸುಗಳಿಗೆ ಸುಟ್ಟಗಾಯಗಳಾಗಿದೆ. ಇಷ್ಟೇ ಅಲ್ಲದೆ ಮಹಿಳೆ ಆಸಿಡ್ ಎರಚಿದ್ದನ್ನು ಒಪ್ಪಿಕೊಂಡಿದ್ದಾರೆ. ನಾನು ಮಾಡಿದ್ದು ತಪ್ಪಿಲ್ಲ ಎಂದೂ ಹೇಳಿದ್ದಾರೆ.
ನಮ್ಮ ಖಾಸಗಿ ಜಾಗಕ್ಕೆ ಇವರ ಹಸುಗಳನ್ನು ಮೇಯಲು ಯಾಕೆ ಕಳಿಸಬೇಕು, ಬಾತ್‌ರೂಮ್ ತೊಳೆಯಲು ಇಟ್ಟಿದ್ದ ಆಸಿಡ್‌ನ್ನು ಎರಚಿದ್ದೇನೆ. ಹಸುಗಳು ಮನೆ ಬಳಿ ಬರಬಾರದು ಅನ್ನೋದಷ್ಟೇ ನನ್ನ ಉದ್ದೇಶ ಎಂದು ಹೇಳಿದ್ದಾರೆ.
ಹಸುಗಳಿಗೆ ಸುಟ್ಟ ಗಾಯಗಳಾಗಿದ್ದು, ನೋವಿನಿಂದ ನರಳುತ್ತಿವೆ. ಹಾಲು ಕೊಡುವುದನ್ನು ನಿಲ್ಲಿಸಿವೆ ಎಂದು ಸೋಲದೇವನಹಳ್ಳಿ ಠಾಣೆಯಲ್ಲಿ ಹಸುಗಳ ಮಾಲೀಕರು ದೂರು ದಾಖಲಿಸಿದ್ದಾರೆ.