ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬಾಡಿಗೆ ಮನೆಯೊಂದರಲ್ಲಿ ಪತ್ನಿಯನ್ನು ಕೊಲೆಗೈದು ಗೋಣಿಚೀಲದಲ್ಲಿ ಮೃತದೇಹವನ್ನು ತುಂಬಿಸಿಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಇಮ್ರಾನ್ ಶೇಖ್ ಬಂಧಿತ ಆರೋಪಿ. ಈತನನ್ನು ಪಶ್ಚಿಮ ಬಂಗಾಳದ ಪೊಲೀಸರ ಸಹಕಾರದೊಂದಿಗೆ ಬಂಧಿಸಿದ್ದಾರೆ.
ಸುಳ್ಯದ ಬೀರಮಂಗಳದ ಮನೆಯೊಂದರಲ್ಲಿ ಕಳೆದ ಏಳು ತಿಂಗಳಿಂದ ವಾಸವಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಊರಿಗೆ ತೆರಳುವುದಾಗಿ ತಾನು ಕೆಲಸ ಮಾಡುತ್ತಿದ್ದ ಹೊಟೇಲ್‌ನವರಲ್ಲಿ ಹೇಳಿ ಹೋಗಿದ್ದ. ಆದರೆ ಆರೋಪಿ ಹೊರ ಹೋಗುವಾಗ ಒಬ್ಬನೇ ಹೋಗಿದ್ದನ್ನಲ್ಲದೆ, ಆತ ಹೋಗುವುದಕ್ಕೂ ಮುನ್ನ ಆತನ ಮನೆಯಿಂದ ಕಿರುಚಿದ ಶಬ್ದ ಕೇಳಿದ್ದು, ಅಕ್ಕಪಕ್ಕದ ಮನೆಯವರಿಗೆ ಸಂಶಯ ಬಂದಿತ್ತು. ಅದರಂತೆ ಸುಳ್ಯ ಪೊಲೀಸರಿಗೂ ವಿಷಯ ತಿಳಿಸಲಾಗಿತ್ತು. ಬಳಿಕ ಪೊಲೀಸರು ಬಂದು ಬಾಡಿಗೆ ಮನೆಯ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಗೋಣಿಚೀಲದಲ್ಲಿ ಆತನ ಪತ್ನಿಯ ಶವ ಪತ್ತೆಯಾಗಿತ್ತು.