ಹೊಸದಿಗಂತ ವರದಿ, ಬೆಳಗಾವಿ:
ಅಥಣಿಯಲ್ಲಿ ನಡೆಯುವ ಗಡಿನಾಡ ಕನ್ನಡ ಸಾಂಸ್ಕೃತಿಕ ಸಂಭ್ರಮದಲ್ಲಿ ಕೊಡ ಮಾಡುವ ಗಡಿನಾಡ ಶಿರೋಮಣಿ ಪ್ರಶಸ್ತಿಯನ್ನು ಬೈಲಹೊಂಗಲ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ನಾಗನೂರ ಇಲ್ಲಿಯ ಇಂಗ್ಲೀಷ್ ಉಪನ್ಯಾಸಕರಾದ ಜಯಶ್ರೀ. ಅಬ್ಬಿಗೇರಿಯವರಿಗೆ ಅವರ ಅಮೋಘ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಘೋಷಿಸಲಾಗಿದೆ.
ನವಂಬರ್ ೨೭ ರಂದು ಆರ್ ಎಚ್ ಕುಲಕರ್ಣಿ ಸಭಾಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಗುತ್ತಿದೆ ಎಂದು ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಚಮಕೇರಿ ಅಧ್ಯಕ್ಷರಾದ ಮಹಾದೇವ ಬಿರಾದರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಯಶ್ರೀ ಅಬ್ಬಿಗೇರಿ ಅವರು ಉಪನ್ಯಾಸಕ ವೃತ್ತಿಯ ಜೊತೆಯಲ್ಲೇ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಮೂಲ್ಯ ಕೃಷಿ ಮಾಡುವ ಮೂಲಕ ಸಾರಸ್ವತ ಲೋಕದಲ್ಲಿ ಹೆಸರು ಮಾಡಿದ್ದಾರೆ.