January23, 2026
Friday, January 23, 2026
spot_img

WOMEN | ಪ್ರೆಗ್ನೆನ್ಸಿಯಲ್ಲಿ ಸಾಧ್ಯವಾದಷ್ಟು ಅವಕಾಡೋ ತಿಂದುಬಿಡಿ, ಯಾಕೆ ಗೊತ್ತಾ??

ಆವಕಾಡೊ ಹಣ್ಣು ಗರ್ಭಿಣಿಯರಿಗೆ ಹೆಚ್ಚು ಒಳ್ಳೆಯದು. ಆವಕಾಡೊ ಹಣ್ಣು ಸೇವಿಸುವುದರಿಂದ ಮಗುವಿನ ಬೆಳವಣಿಗೆಗೆ ಉತ್ತಮ, ಆರು ತಿಂಗಳ ಅವಧಿಯಲ್ಲಿ ಗರ್ಭಿಣಿಯರು ಈ ಹಣ್ಣನ್ನು ಸೇವಿಸಬೇಕು. ಇದ್ರಿಂದ ಇನ್ನು ಯಾವ ಲಾಭ ಇದೆ ನೋಡಿ..

ಹಾರ್ಮೋನುಗಳ ಸಮತೋಲನ, ಪಿಸಿಒಡಿ, ಅನಿಯಮಿತ ಮುಟ್ಟಿನ ಸಮಸ್ಯೆಗಳು, ಫಲವತ್ತತೆ ಹಾಗೂ ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಉತ್ತಮವಾಗಿದೆ.

ಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡಲು, ಎದೆ ಹಾಲಿನಲ್ಲಿ ಪೋಷಕಾಂಶಗಳನ್ನು ಹೆಚ್ಚಿಸಲು ಹಾಗೂ ನಿದ್ರಾಹೀನತೆ ಕಡಿಮೆ ಮಾಡುತ್ತದೆ. 

ಅವಕಾಡೊಗಳಲ್ಲಿ ಕಂಡುಬರುವ ಫೋಲಿಕ್ ಆಮ್ಲವು ಭ್ರೂಣದ ಮೆದುಳು ಹಾಗೂ ನರಮಂಡಲದಲ್ಲಿನ ದೋಷಗಳನ್ನು ತಡೆಯುತ್ತದೆ. ಒಂದು ಆವಕಾಡೊ ಹಣ್ಣು ಫೋಲಿಕ್ ಆಮ್ಲದ ದೈನಂದಿನ ಅವಶ್ಯಕತೆಯ ಶೇ. 41ರಷ್ಟು ಪೂರೈಸುತ್ತದೆ. ಲುಟೀನ್ ಮತ್ತು ಜಿಯಾಕ್ಸಾಂಥಿನ್ ಮಗುವಿನ ಕಣ್ಣಿನ ಆರೋಗ್ಯವನ್ನು ರಕ್ಷಿಸುತ್ತದೆ. 

ವಿಟಮಿನ್ ಇ ಗರ್ಭಾಶಯದ ಎಂಡೊಮೆಟ್ರಿಯಲ್ ಲೈನಿಂಗ್ ನಿರ್ಮಿಸುತ್ತದೆ. ಈ ಹಣ್ಣು ಭ್ರೂಣವು ಆರೋಗ್ಯಕರವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಪೊಟ್ಯಾಸಿಯಮ್ ಗರ್ಭಿಣಿ ಮಹಿಳೆಯರಲ್ಲಿ ರಕ್ತದೊತ್ತಡ ನಿಯಂತ್ರಿಸುತ್ತದೆ. ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ.

Must Read