ಮೆಂತೆಯಲ್ಲಿ ಹೇರಳವಾಗಿ ಆರೋಗ್ಯ ಸಂಬಂಧಿ ಗುಣಗಳಿವೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧಕ ಅಂಶಗಳು ಕೂಡ ಇವೆ. ಮಹಿಳೆಯರು ಸದಾ ಮೆಂತೆಯನ್ನು ಜೊತೆಯಲ್ಲಿ ಇಟ್ಟುಕೊಳ್ಳಿ. ಮೆಂತೆ ಜೊತೆಯಿದ್ದರೆ ಆರೋಗ್ಯವೇ ಇದ್ದಂತೆ. ಮೆಂತೆಯಿಂದ ಏನೆಲ್ಲ ಲಾಭವಿದೆ ನೋಡಿ..
- ಪೀರಿಯಡ್ಸ್ ಸಮಯದಲ್ಲಿ ಬರುವ ಹೊಟ್ಟೆನೋವಿಗೆ ಮೆಂತೆ ರಾಮಬಾಣ. ನೆನೆಸಿಟ್ಟ ಮೆಂತೆಯನ್ನು ಹಸಿ ಹಾಲಿನಲ್ಲಿ ರುಬ್ಬಿಕೊಂಡು ಕುಡಿದರೆ ಹೊಟ್ಟೆ ನೋವು ತಕ್ಷಣ ನಿವಾರಣೆಯಾಗುತ್ತದೆ.
- ಕೂದಲ ಆರೈಕೆಯಲ್ಲಂತೂ ಮೆಂತೆ ಪಾತ್ರ ಬಹಳ ದೊಡ್ಡದಿರುತ್ತದೆ. ವಾರದಲ್ಲಿ ಮೂರು ದಿನ ಕೂದಲಿಗೆ ಮೆಂತೆ ಪ್ಯಾಕ್ ಹಾಕಿಕೊಳ್ಳಿ. ಕೂದಲು ಉದುರುವುದು, ಹೊಟ್ಟು, ಸ್ಪ್ಲಿಟ್ ಹೇರ್ ಸಮಸ್ಯೆ ನಿವಾರಣೆಯಾಗುತ್ತದೆ.
- ಪೀರಿಯಡ್ಸ್ ಮುಂದೆ ಹೋಗಬೇಕೆಂದರೆ ಪೀರಿಯಡ್ಸ್ ಆಗುವುದಕ್ಕೂ ಒಂದು ವಾರ ಮೊದಲಿನಿಂದ ನೀರಿನಲ್ಲಿ ನೆನೆಸಿಟ್ಟ 10 ಮೆಂತೆಯನ್ನು ತಿಂದು ನೀರು ಕುಡಿಯಿರಿ. ದಿನದಲ್ಲಿ ಮೂರು ಹೊತ್ತು ಮಾಡಬೇಕು.
- ಬಿಳಿ ಸೆರಗು ಸಮಸ್ಯೆ ಇರುವವರು ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಹಸಿ ಆಕಳ ಹಾಲಿನಲ್ಲಿ ನೆನೆಸಿಟ್ಟ ಮೆಂತೆಯನ್ನು ರುಬ್ಬಿಕೊಂಡು ಕುಡಿಯಬೇಕು. ಹೀಗೆ ಒಂದು ವಾರ ಮಾಡಿದರೂ ಸಾಕು ಬಿಳಿ ಸೆರಗು ಸಮಸ್ಯೆ ನಿವಾರಣೆಯಾಗುತ್ತದೆ.
- ಮುಖದಲ್ಲಿ ಎಣ್ಣೆ ಅಂಶ ಹೆಚ್ಚಿರುವವರು ಮೆಂತೆ ಪೇಸ್ಟ್ ನ್ನು ಉಗುರು ಬಿಸಿ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ವಾರ ಪೂರ್ತಿ ದಿನದಲ್ಲಿ ಒಂದು ಸಲ ಮಾಡಿ ನೋಡಿ. ಕ್ರಮೇಣ ಎಣ್ಣೆ ಅಂಶ ಕಡಿಮೆ ಆಗುತ್ತದೆ.
- ಮಹಿಳೆಯರ ಕಾಲಿನ ಸೌಂದರ್ಯವನ್ನೇ ಹಾಳು ಮಾಡುವ ಹಿಮ್ಮಡಿ ಬಿರುಕು ಸಮಸ್ಯೆ ನಿವಾರಣೆಗೆ ಮೆಂತೆ ಬೆಸ್ಟ್ ಮದ್ದು. ಮೆಂತೆ ಪೇಸ್ಟ್ ಗೆ ಲಿಂಬು ರಸವನ್ನು ಮಿಕ್ಸ್ ಮಾಡಿ ಹಿಮ್ಮಡಿ ಬಿರುಕಿಗೆ ಹಚ್ಚಿ, 1 ಗಂಟೆ ಬಿಡಿ. ಹೀಗೆ ಮಾಡಿದರೆ ಹಿಮ್ಮಡಿ ಬಿರುಕು ಸಮಸ್ಯೆ ನಿವಾರಣೆಯಾಗುತ್ತದೆ.