February 24, 2026
Tuesday, February 24, 2026
spot_img

Women | ಜಡೆ ಹಾಕ್ಬೇಕಾ?, ಸಡಿಲವಾಗಿ ಬಿಡಬೇಕಾ! ರಾತ್ರಿ ಮಲಗೋವಾಗ ಕೂದಲು ಹೇಗೆ ಕಟ್ಕೋಬೇಕು?

ರಾತ್ರಿ ಮಲಗೋ ಸಮಯ ಅನ್ನೋದು ದೇಹಕ್ಕೆ ವಿಶ್ರಾಂತಿಯಷ್ಟೇ ಅಲ್ಲ, ಕೂದಲಿಗೂ ರಿಕವರಿ ಟೈಮ್. ದಿನವಿಡೀ ಧೂಳು, ಸೂರ್ಯ, ಸ್ಟೈಲಿಂಗ್ ಒತ್ತಡ ಅನುಭವಿಸಿದ ಕೂದಲು, ರಾತ್ರಿ ನಾವು ಹೇಗೆ ಕಟ್ಟಿ ಮಲಗುತ್ತೇವೆ ಅನ್ನೋದ್ರ ಮೇಲೆ ಅದರ ಆರೋಗ್ಯ ನಿರ್ಧಾರವಾಗುತ್ತದೆ. ಜಡೆ ಹಾಕ್ಬೇಕಾ? ಸಡಿಲವಾಗಿ ಬಿಡಬೇಕಾ? ಈ ಪ್ರಶ್ನೆ ಬಹುತೇಕ ಮಹಿಳೆಯರ ಮನಸ್ಸಲ್ಲಿ ಇದ್ದೆ ಇರುತ್ತೆ ಅದಿಕ್ಕೆ ಉತ್ತರ ಇಲ್ಲಿದೆ ನೋಡಿ.

ಆರೈಕೆಯ ಮೊದಲ ಹೆಜ್ಜೆ:

ರಾತ್ರಿ ಕೂದಲು ಸರಿಯಾಗಿ ಕಟ್ಟಿ ಮಲಗಿದ್ರೆ ಮುರಿತ, ಉದುರುವಿಕೆ, ಸ್ಪ್ಲಿಟ್ ಎಂಡ್ಸ್ ಕಡಿಮೆಯಾಗುತ್ತವೆ. ಅಸಡ್ಡೆ ಮಾಡಿದ್ರೆ ಬೆಳಿಗ್ಗೆ ಕೂದಲು ಹಕ್ಕಿ ಗೂಡು ಆಗಿ ತಲೆನೋವಿಗೆ ಕಾರಣವಾಗಬಹುದು.

ಸಡಿಲ ಜಡೆ – ಸೇಫ್ ಆಯ್ಕೆ:

ತುಂಬಾ ಬಿಗಿಯಾದ ಜಡೆ ಕೂದಲಿನ ಬೇರುಗಳಿಗೆ ಒತ್ತಡ ಕೊಡುತ್ತೆ. ಆದರೆ ಸಡಿಲವಾಗಿ ಹಾಕಿದ ಜಡೆ ಕೂದಲು ಸಿಕ್ಕುಗಟ್ಟುವುದನ್ನು ತಡೆದು, ನ್ಯಾಚುರಲ್ ತೇವಾಂಶ ಉಳಿಸುತ್ತದೆ. ರಬ್ಬರ್ ಬ್ಯಾಂಡ್ ಬದಲು ಸಾಫ್ಟ್ ಸ್ಕ್ರಂಚಿ ಬಳಸೋದು ಉತ್ತಮ.

ತೆರೆದ ಕೂದಲು – ಯಾವಾಗ ಸರಿ?:

ತುಂಬಾ ಚಿಕ್ಕ ಕೂದಲು ಇದ್ದವರಿಗೆ ಅಥವಾ ಕೂದಲು ಒಣಗಿದ ಸ್ಥಿತಿಯಲ್ಲಿ ಇದ್ದಾಗ ಮಾತ್ರ ಸಡಿಲವಾಗಿ ಬಿಡಬಹುದು. ಆದರೆ ಹಾಸಿಗೆಯ ಮೇಲೆ ಕೂದಲು ಬಿಡಿಸಿ ಮಲಗೋದ್ರಿಂದ ಮುರಿತ ಜಾಸ್ತಿ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ:

ತಲೆಗೆ ಎಣ್ಣೆ ಹಚ್ಚಿ ಮಲಗೋದ್ರಿಂದ ಲಾಭ:

ವಾರಕ್ಕೆ 2–3 ದಿನ ಸ್ವಲ್ಪ ಎಣ್ಣೆ ಹಾಕಿ ಸಡಿಲ ಜಡೆ ಹಾಕಿ ಮಲಗಿದ್ರೆ ಕೂದಲು ಪೋಷಣೆಯಾಗುತ್ತೆ. ಆದರೆ ತುಂಬಾ ಎಣ್ಣೆ ಹಾಕಿ ಬಿಟ್ಟುಬಿಟ್ಟರೆ ಧೂಳು ಅಂಟೋ ಸಾಧ್ಯತೆ ಹೆಚ್ಚು.

ಒಂದು ಸಣ್ಣ ರೂಟೀನ್

ಮಲಗೋ ಮುಂಚೆ ಕೂದಲು ಚೆನ್ನಾಗಿ ಒಣಗಿಸಿ, ಸಡಿಲ ಜಡೆ ಹಾಕಿ, ಮನಸ್ಸಿಗೂ ವಿಶ್ರಾಂತಿ ಕೊಡಿ. ಚೆನ್ನಾಗಿ ಮಲಗಿದರೆ ಕೂದಲೂ ಚೆನ್ನಾಗಿರುತ್ತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !