Saturday, February 4, 2023

Latest Posts

ಎಲ್ಲರ ಕಾಳಜಿ ಮಾಡುತ್ತಾ ತಮ್ಮನ್ನೇ ತಾವು ಮರೆಯುವ ಮಹಿಳೆಯರೇ.. ತಪ್ಪದೇ ಇದನ್ನು ಓದಿ..

ಎಷ್ಟು ದಿನ ಆಯ್ತು ನೆಮ್ಮದಿಯಾಗಿ ಕುಳಿತು ತಿಂಡಿ ತಿಂದು? ನಿಮ್ಮಿಷ್ಟದ ಸಿನಿಮಾ ನೋಡಿ? ನಿಮ್ಮಿಷ್ಟ ಎಂದರೆ ನೀವು ನಿಮ್ಮ ಗಂಡ, ನಿಮ್ಮ ಮಕ್ಕಳ ಇಷ್ಟಅಲ್ಲ, ನಿಮ್ಮದೊಂದೇ ಇಷ್ಟದ ಸಿನಿಮಾ? ಯೋಚಿಸೋಕೆ ಒಂದು ನಿಮಿಷ ತೆಗೆದುಕೊಂಡ್ರಿ ಅಲ್ವಾ?

2011-census - Lost labour: Indian women workers - Telegraph Indiaಮಾವ ಕರಿಬೇವು ತಿನ್ನೋದಿಲ್ಲ, ಅತ್ತೆಗೆ ಕಡ್ಲೆಬೇಳೆ ಆಗೋದಿಲ್ಲ, ಗಂಡನಿಗೆ ಬದನೆಕಾಯಿ ಅಲರ್ಜಿ, ಮಗನಿಗೆ ನಿಂಬೆಹುಳಿ ಆಗೋದಿಲ್ಲ. ಎಷ್ಟೆಲ್ಲಾ ನೆನಪಿಟ್ಟುಕೊಳ್ಳಬೇಕು? ಈ ಮಧ್ಯೆ ನಿಮಗೆ ಕಡ್ಲೆಬೇಳೆ ಇಲ್ಲದ ಅಡುಗೆ ಇಷ್ಟವೇ ಇಲ್ಲ ಅನ್ನೋದನ್ನು ಮರೆತು ಹೋದ್ರಾ?

Women Still Do More Chores At Home Than Men, Study Finds | HuffPost Lifeಅಷ್ಟು ಇಷ್ಟಪಟ್ಟು ಮಾಡುತ್ತಿದ್ದ ಪೇಂಟಿಂಗ್ ಈಗೇಕೆ ಮಾಡೋದಿಲ್ಲ? ಹೋಗ್ಲಿ ನಿಮ್ಮ ಸ್ನೇಹಿತರೆಲ್ಲ ಎಲ್ಲಿ ಹೋದ್ರು? ಅವಳು ಎಲ್ಲಿದ್ದಾಳೆ, ಅವನು ಏನು ಕೆಲಸ ಮಾಡ್ತಿದ್ದಾನೆ, ಅವಳ ಎರಡನೇ ಮಗು ಗಂಡಾ, ಹೆಣ್ಣಾ? ಯಾವುದಕ್ಕೂ ನಿಮ್ಮ ಬಳಿ ಉತ್ತರವೇ ಇಲ್ಲ. ಮೊಬೈಲ್‌ನ ಸ್ಟೇಟಸ್ ನೋಡಿ ತಿಳಿದುಕೊಂಡ ಮಾಹಿತಿ ಬಿಟ್ಟು ಸ್ಪೆಷಲ್ ವಿಷಯ ಇನ್ನೇನೂ ತಿಳಿದಿಲ್ಲ..

10 Household Chores to Work Up a Sweat - Lifestyleನೀವೇಕೆ ಹೀಗೆ ಆಗಿದ್ದು? ಜವಾಬ್ದಾರಿ? ಪ್ರೀತಿ? ಅನಿವಾರ್ಯ? ಒಮ್ಮೆ ನಿಧಾನಕ್ಕೆ ಯೋಚಿಸಿ.  ಗಂಡ ಆಫೀಸ್‌ಗೆ ಹೋಗ್ತಾರೆ ಅವರಿಗೆ ಅಲ್ಲೊಂದು ಜೀವನ ಇದೆ, ಅತ್ತೆ-ಮಾವ ನೆಂಟರ ಮನೆಗೆ ಹೋಗ್ತಾರೆ, ಬೇಕೆನಿಸಿದಾಗ ಹಳ್ಳಿಗೆ ಹೋಗಿಬಿಡುತ್ತಾರೆ. ಆದರೆ ನಿಮಗೆ? ಮನೆ ಮಕ್ಕಳು ಬಿಟ್ಟು ಇನ್ನೇನಿದೆ?

Work-life balance: tips for your family | Raising Children Networkನಿಮ್ಮನ್ನು ನೀವು ಕಳೆದುಕೊಳ್ಳಬೇಡಿ. ನಿಮಗಾಗಿ ಸಮಯ ಎತ್ತಿಡುವುದನ್ನು ತಪ್ಪು ಎಂದು ಭಾವಿಸಬೇಡಿ. ಹಾಯಾಗಿ ಕುಳಿತು ಟಿವಿ ನೋಡುತ್ತಾ ತಿನ್ನುವುದಕ್ಕೆ ಗಿಲ್ಟ್ ಬೇಡ. ಮಕ್ಕಳನ್ನು ದೊಡ್ಡವರ ಜೊತೆ ಕಳುಹಿಸಿ ಸುತ್ತಲು ಹೋಗಿದ್ದಕ್ಕೆ ಮನಸ್ಸು ಚಿಕ್ಕದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನೀವು ಈಗಲೂ ಒಳ್ಳೆಯ ತಾಯಿ, ಹೆಂಡತಿ, ಸೊಸೆ, ಮಗಳು!

7 Things Every Happy Woman Does - Project Hot Messನಿಮಗಾಗಿ ಈ ಕೆಲಸಗಳನ್ನು ಮಾಡಲು ಪ್ರಯತ್ನಿಸಿ..

ಬೆಳಗ್ಗೆ ಎದ್ದು ಒಂದು ಲೋಟ ನೀರು ಕುಡಿಯಿರಿ, ಇದು ಸಿಲ್ಲಿ ಎನಿಸಬಹುದು, ಗಂಡನನ್ನು ಆಫೀಸ್‌ಗೆ, ಮಕ್ಕಳನ್ನು ಶಾಲೆಗೆ ಕಳಿಸುವ ಅವಸರದಲ್ಲಿ ಒಂದು ಲೋಟ ನೀರು ಕುಡಿಯುವುದನ್ನೂ ಮರೆಯುತ್ತೀರಿ.

15 benefits of drinking water and other water factsಯೋಗ, ವಾಕ್, ಜಿಮ್, ಧ್ಯಾನ ಯಾವುದಾದರೂ ಒಂದನ್ನು ರೂಢಿ ಮಾಡಿಕೊಳ್ಳಿ. ನಿಮ್ಮ ಆರೋಗ್ಯಕ್ಕೆ ಇದು ಮುಖ್ಯ.

Yoga Women Pictures | Download Free Images on Unsplashಮನೆಯಲ್ಲಿ ದೊಡ್ಡವರು ಇಲ್ಲ ಎಂದಾದರೆ ನೀವೆ ಒಂದು ಪಾರ್ಟಿ ಪ್ಲಾನ್ ಮಾಡಿ. ಅಥವಾ ಯಾರ ಮನೆಯಲ್ಲಾದರೂ ಪಾರ್ಟಿ ಇದ್ದರೆ ಅದಕ್ಕೆ ಹೋಗಿಬನ್ನಿ.

Mutual funds vs Kitty Party funds: What women should know! - Hindustan Timesಎಲ್ಲಿ ನಿಮ್ಮ ಗರ್ಲ್ಸ್ ಗ್ಯಾಂಗ್? ಸ್ನೇಹಿತೆಯರೆಲ್ಲ ಕೂಡಿ ಗಿಲ್ಟ್ ಫ್ರೀ ಟ್ರಿಪ್ ಮಾಡಿಬನ್ನಿ.

10 Destinations For Your Last 'Single Girls' Trip That Are Not Goaಇಷ್ಟವಿರುವ ಹಾಬಿಗೆ ದಿನದಲ್ಲಿ ಅರ್ಧ ಗಂಟೆ ಸಮಯ ನೀಡೋಕೆ ಆಗೋದಿಲ್ವಾ? ಅಕ್ಕಿಯಲ್ಲಿ ಕಲ್ಲು ತೆಗೆಯೋದು, ಬಟ್ಟೆ ಒಣಗಿಹಾಕೋದು ದಿನವೂ ಇರುತ್ತದೆ. ನಿಮಗಾಗಿ ಸಮಯ ನೀಡಿ.

HD wallpaper: woman doing painting, people, girl, art, board, brush,  material | Wallpaper Flareಹೊರಗೆ ಹೋಗಿ ಬನ್ನಿ, ಶಾಪಿಂಗ್, ಹೋಟೆಲ್ ಎಲ್ಲಿಗಾದರೂ, ಯಾರ ಜೊತೆಯಾದರೂ ಸರಿ. ನಿಮ್ಮ ಖುಷಿ ನಿಮಗೆ ಮುಖ್ಯವಾಗಿರಲಿ. ಹೀಗೆ ಮಾಡಿದರೆ ನೀವು ಸ್ವಾರ್ಥಿ ಅಲ್ಲ. ಅದು ತಲೆಯಲ್ಲಿರಲಿ.

Asian girl shopping Images | Free Vectors, Stock Photos & PSDನಿಮ್ಮ ಸ್ಕಿನ್ ಕೇರ್, ಹೇರ್‌ಕೇರ್, ಪಾರ್ಲರ್ ವಿಸಿಟ್ ಯಾವುದನ್ನೂ ಕಾಂಪ್ರಮೈಸ್ ಮಾಡಬೇಕಿಲ್ಲ. ನಿಮ್ಮ ಖುಷಿಗೆ ಪ್ರಾಮುಖ್ಯತೆ ನೀಡಿ.

Best Home Remedies for Acne-Prone Skin | Everyday Health

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!