ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಷ್ಠಿತ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ನ್ಯೂಜಿಲೆಂಡ್‌ನ ಮೌಂಟ್ ಮೊಂಗನುಯಿಯಲ್ಲಿ ಶುಕ್ರವಾರ ಭರ್ಜರಿ ಚಾಲನೆ ದೊರೆತಿದೆ. ಊದ್ಘಾಟನಾ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ಹಾಗೂ ಆತಿಥೇಯ ನ್ಯೂಜಿಲ್ಯಾಂಡ್ ಮಹಿಳಾ ತಂಡಗಳು ಮುಖಾಮುಖಿಯಾಗಿವೆ.
ಏಪ್ರಿಲ್ 3ರ ವರೆಗೆ ಟೂರ್ನಿ ಸಾಗಿಬರಲಿದೆ. ಈ ನಡುವೆ ಐಸಿಸಿ ಹೊಸ ಘೋಷಣೆಯೊಂದನ್ನು ಮಾಡಿದ್ದು, ವಿಶ್ವಕಪ್ ನ ಎಲ್ಲಾ ಪಂದ್ಯಗಳಲ್ಲಿ ಅಂಪೈರ್ ಡಿಸಿಷನ್ ರಿವ್ಯೂ ಸಿಸ್ಟಮ್ (DRS) ಬಳಸಲು ಅನುಮತಿಸಿದೆ. ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಡಿಆರ್‌ಎಸ್ ಬಳಕೆ ಮಾಡುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು 2017 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬಳಕೆ ಮಾಡಲಾಗಿತ್ತು. “ಡಿಸಿಷನ್ ರಿವ್ಯೂ ಸಿಸ್ಟಮ್ (DRS) ಎಲ್ಲಾ ಪಂದ್ಯಗಳಿಗೆ ಲಭ್ಯವಿರುತ್ತದೆ ಎಂದು ಐಸಿಸಿ ಹೇಳಿಕೆ ನೀಡಿದೆ. ಭಾರತ ಭಾನುವಾರ ತನ್ನ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ