ಲಂಕನ್ನರನ್ನು ಮಣಿಸಿ ದಾಖಲೆಯ 7ನೇ ಬಾರಿ ಏಷ್ಯಾಕಪ್‌ ಎತ್ತಿಹಿಡಿದ ಟೀಂ ಇಂಡಿಯಾ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶದ ಸಿಲ್ಹೆಟ್‌ನ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ 2022 ಫೈನಲ್‌ನಲ್ಲಿ ಭಾರತದ ವನಿತೆಯರು ಶ್ರೀಲಂಕಾ ವನಿತೆಯರನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ದಾಖಲೆಯ 7ನೇ ಬಾರಿಗೆ ಮಹಿಳಾ ಏಷ್ಯಾಕಪ್ ಗೆದ್ದ ಸಾಧನೆ ಬರೆದಿದೆ.
2004 ರಿಂದ ಆರಂಭವಾದ ಈ ಟೂರ್ನಿಯಲ್ಲಿ 6 ಬಾರಿ ಸತತವಾಗಿ ಗೆದ್ದು ಏಷ್ಯಾಕಪ್ ಚಾಂಪಿಯನ್ನರ ಪಟ್ಟಿಯಲ್ಲಿ ಅಜೇಯರಾಗಿ ಉಳಿದಿದ್ದ ಭಾರತ ಕಳೆದ ಆವೃತ್ತಿಯಲ್ಲಿ ಬಾಂಗ್ಲಾ ವಿರುದ್ಧ ಫೈನಲ್​ನಲ್ಲಿ ಸೋತಿತ್ತು. ಈ ಬಾರಿ ಮತ್ತೆ ಛಲದಲ್ಲಿ ಹೋರಾಡಿದ ಭಾರತ ತನ್ನ ಏಷ್ಯನ್ ಚಾಂಪಿಯನ್ ಪಟ್ಟವನ್ನು ಮರಳಿ ಪಡೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗೆ ಇಳಿದ ಶ್ರೀಲಂಕಾ ತಂಡದ ಆರಂಭವೇ ಆಘಾತಕಾರಿಯಾಗಿತ್ತು. ಲಂಕಾ 3.5 ಓವರ್‌ ಗಳಲ್ಲಿ ಕೇವಲ 9 ರನ್ ಗೆ 5 ವಿಕೆಟ್‌ ಕಳೆದುಕೊಂಡಿತ್ತು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ರೇಣುಕಾ ಸಿಂಗ್‌ 5 ರನ್‌, 3 ವಿಕೆಟ್), ದೀಪ್ತಿ ಶರ್ಮಾ (4 ಓವರ್, 7 ರನ್)‌ ಎಸೆತಗಳಿಗೆ ತಿಣುಕಾಡಿದ ಲಂಕಾ 20 ಓವರ್‌ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 65 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.
ಭಾರತದ ಪರ ಹರ್ಮನ್‌ಪ್ರೀತ್ ಕೌರ್ ತಂಡದ ಪರವಾಗಿ ಸ್ನೇಹ ರಾಣಾ ಮತ್ತು ರಾಜೇಶ್ವರಿ ಗಾಯಕ್‌ವಾಡ್ ಕ್ರಮವಾಗಿ ಎರಡು ವಿಕೆಟ್ ಪಡೆದರು.
66 ರನ್‌ಗಳ ಗುರಿ ಬೆನ್ನತ್ತಿದ ಭಾರತ  ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು.  8.3 ಓವರ್‌ಗಳಲ್ಲಿ 2 ವಿಕೆಟ್‌ಗೆ 71 ರನ್ ಗಳಿಸಿ ವಿಜಯೋತ್ಸವ ಆಚರಿಸಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 25 ಎಸೆತಗಳಲ್ಲಿ 51 ರನ್ ಗಳಿಸಿ ಅಜೇಯ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!