ಮಹಿಳಾ ಏಷ್ಯಾಕಪ್​: ಥಾಯ್ಲೆಂಡ್​ ವಿರುದ್ಧ ಭಾರತಕ್ಕೆ ಸುಲಭ ಗೆಲುವು, ಸೆಮೀಸ್​ಗೆ ಎಂಟ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯಾಕಪ್​ ಪಂದ್ಯದಲ್ಲಿ ಭಾರತ ವನಿತೆಯರು ಮತ್ತು ಥಾಯ್ಲೆಂಡ್​ ವಿರುದ್ಧ 9 ವಿಕೆಟ್​ಗಳ ಸುಲಭ ಜಯ ಗಳಿಸಿದೆ.

ಥಾಯ್ಲೆಂಡ್​ ನೀಡಿದ್ದ 38 ರನ್​ಗಳ ಸುಲಭ ಗುರಿಯನ್ನು ಒಂಡು ವಿಕೆಟ್​ ನಷ್ಟದಿಂದ ಭಾರತ ಗೆಲುವು ಸಾಧಿಸಿದೆ. ಈ ಮೂಲಕ ಆರು ಪಂದ್ಯಗಳಲ್ಲಿ 5 ಗೆದ್ದು 10 ಅಂಕಗಳಿಂದ ಸೆಮಿಫೈನಲ್​ ಪಂದ್ಯಕ್ಕೆ ಕ್ವಾಲಿಫೈ ಆಗಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಥಾಯ್ಲೆಂಡ್​ ತಂಡಕ್ಕೆ ಭಾರತೀಯ ಬೌಲರ್​ಗಳು ಕಾಡಿದರು. ಥಾಯ್ಲೆಂಡ್​ ಪರ ಎನ್ ಕೊಂಚರೊಯೆಂಕೈ 12 ರನ್​ ಗಳಿಸಿದ್ದು ಬಿಟ್ಟರೆ, ಮತ್ತಾರು ಹತ್ತು ರನ್​ನ ಗಡಿ ಮುಟ್ಟಲೇ ಇಲ್ಲ. ಮೂರು ಜನ ಸೊನ್ನೆ ಸುತ್ತಿದರು. ಯಾರೋಬ್ಬರೂ ಕ್ರೀಸ್​ನಲ್ಲಿ ನಿಲ್ಲಲಿಲ್ಲ. 15.1 ಓವರ್​ಗೆ 37 ರನ್​ ಗಳಿಸಿ ತನ್ನೆಲ್ಲಾ ವಿಕೆಟ್​ಗಳನ್ನು ಥಾಯ್ಲೆಂಡ್​ ಕಳೆದು ಕೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!