Monday, September 25, 2023

Latest Posts

ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ರಿಲೀಸ್: ಭಾರತದ ಮೊದಲ ಎದುರಾಳಿ ಥಾಯ್ಲೆಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ರಾಂಚಿ 2023ರ ವೇಳಾಪಟ್ಟಿಯನ್ನು ಏಷ್ಯನ್ ಹಾಕಿ ಫೆಡರೇಶನ್ ಮತ್ತು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದೆ.

ಅಕ್ಟೋಬರ್ 27 ರಂದು ಮಲೇಷ್ಯಾ ಮತ್ತು ಜಪಾನ್ ನಡುವಿನ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಜಾರ್ಖಂಡ್‌ನ ರಾಂಚಿಯಲ್ಲಿರುವ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋ ಟರ್ಫ್ ಹಾಕಿ ಸ್ಟೇಡಿಯಂನಲ್ಲಿ ಆತಿಥೇಯ ಭಾರತವು ದಿನದ ಮೂರನೇ ಪಂದ್ಯದಲ್ಲಿ ಥಾಯ್ಲೆಂಡ್ ಅನ್ನು ಎದುರಿಸಲಿದೆ.

ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊರಿಯಾ, ಮಲೇಷ್ಯಾ, ಥಾಯ್ಲೆಂಡ್​, ಜಪಾನ್, ಚೀನಾ ಮತ್ತು ಭಾರತ ಪೈಪೋಟಿ ನಡೆಸಲಿವೆ. ಆರು ತಂಡಗಳ ಪಂದ್ಯಾವಳಿಯು ಅಕ್ಟೋಬರ್ 27 ರಂದು ಪ್ರಾರಂಭವಾಗಿ ನವೆಂಬರ್ 5ರ ವರೆಗೆ ನಡೆಯಲಿದೆ.

ಒಂದೇ ಪೂಲ್‌ನ ಭಾಗವಾಗಿದ್ದು, ಲೀಗ್​ ಹಂತದಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಸೆಮಿ – ಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೆಮಿಸ್​ ಹಂತದಲ್ಲಿ ಒಂದನೇ ಮತ್ತು ನಾಲ್ಕನೇ ತಂಡ, ಮೂರು ಮಬತ್ತು ಎರಡನೇ ತಂಡ ಪೈಪೋಟಿಗಿಳಿಯಲಿದೆ. ಇದರಲ್ಲಿ ಗೆದ್ದವರು ಫೈನಲ್ ಆಡಲಿದ್ದಾರೆ.

ಈ ವರೆಗೆ ಆರು ಆವೃತ್ತಿಯ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ನಡೆದಿದ್ದು, 2010, 2011 ಮತ್ತು 2016ರಲ್ಲಿ ಜಪಾನ್ ಜಯ ದಾಖಲಿಸಿದೆ. ಈ ಬಾರಿ ಹಾಲಿ ಚಾಪಿಯನ್​ ಜಪಾನ್​ ತನ್ನ ಮೊದಲ ಪಂದ್ಯದಲ್ಲಿ ಕೊರಿಯಾವನ್ನು ಎದುರಿಸುತ್ತಿದ್ದಾರೆ.

ಏಷ್ಯನ್ ಹಾಕಿ ಫೆಡರೇಶನ್‌ನ ಅಧ್ಯಕ್ಷ ಡಾಟೊ ಫ್ಯೂಮಿಯೊ ಒಗುರಾ ಮಾತನಾಡಿ,”ಇದು ಏಷ್ಯನ್ ಹಾಕಿ ಸಮುದಾಯಕ್ಕೆ ಒಂದು ಪ್ರಮುಖ ಸಂದರ್ಭವಾಗಿದೆ ಮತ್ತು ಪ್ರತಿಷ್ಠಿತ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉನ್ನತ ಮಟ್ಟದ ಹಾಕಿ ಸ್ಪರ್ಧೆ ನೋಡಲು ನಾವು ಎದುರು ನೋಡುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಹಾಕಿ ಇಂಡಿಯಾಕ್ಕೆ ನನ್ನ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಲು ನಾನು ಬಯಸುತ್ತೇನೆ” ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!