ಬಸ್ಸಿನ ಸೀಟಿಗಾಗಿ ಮಹಿಳೆಯರ ಜಡೆಜಗಳ, ಹಲ್ಲೆ, ಬಟ್ಟೆ ಹಿಡಿದು ಎಳೆದಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೀದರ್‌ನಿಂದ ಕಲಬುರಗಿಗೆ ತೆರಳುತ್ತಿದ್ದ ಬಸ್‌ನಲ್ಲಿ ಇಬ್ಬರು ಮಹಿಳೆಯರು ಸೀಟ್‌ಗಾಗಿ ಕಿತ್ತಾಡಿದ್ದಾರೆ.

ಇದು ಮಾಮೂಲಿ ಕಿತ್ತಾಟ ಅಲ್ಲ, ಮಹಿಳೆಯರು ಸೀಟಿಗಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಬೀದರ್‌ನಿಂದ ಕಲಬುರಗಿ ಬಸ್‌ನಲ್ಲಿಇಬ್ಬರು ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್‌  ಪಡೆದ ಬಳಿಕ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ.

ಸೀಟ್‌ ಬಿಡುವಂತೆ ಮಹಿಳೆ ಆಗ್ರಹಿಸಿದ್ದಾರೆ, ಇಬ್ಬೊಬ್ಬ ಮಹಿಳೆ ಆಗುವುದಿಲ್ಲ ಎಂದು ಗದರಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು ಜಗಳ ಮಾಡುತ್ತಿದ್ದ ಮಹಿಳೆ ಹೊಡೆದಿದ್ದಾಳೆ. ನಂತರ ಸೀರೆಯನ್ನು ಎಳೆದಾಡಿಕೊಂಡು ಜಗಳ ಆಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!