ಲೋಕಸಭಾ ಚುನಾವಣೆ ಮುಗಿದ ಬೆನ್ನಿಗೇ ಮೊಬೈಲ್ ರೀಚಾರ್ಜ್‌ಗಳಲ್ಲಿ 25% ಏರಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಬೈಲ್ ರೀಚಾರ್ಜ್ ದರದಲ್ಲಿ ಹೆಚ್ಚಳ ಮಾಡಲು ಟೆಲಿಕಾಂ ಕಂಪನಿಗಳು ಗಂಭೀರ ಚಿಂತನೆ ನಡೆಸುತ್ತಿವೆ.
ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದ ಬೆನ್ನಿಗೇ ತಮ್ಮ ಶುಲ್ಕವನ್ನು ಶೇ.25ರಷ್ಟು ಹೆಚ್ಚಿಸಲು ಯೋಜಿಸುತ್ತಿವೆ ಎಂದು ಎಕನಾಮಿಕ್ ಟೈಮ್ ವರದಿ ಹೇಳಿದೆ.

ಈಗಾಗಲೇ ದೇಶದಾದ್ಯಂತ 5ಜಿ ಸೇವೆ ನೀಡಲು ಆರಂಭಿಸಿರುವ ಟೆಲಿಕಾಂ ಕಂಪನಿಗಳು ಅದಕ್ಕಾಗಿ ಅಪಾರ ಪ್ರಮಾಣದಲ್ಲಿ ಹಣ ವಿನಿಯೋಗ ಮಾಡಿವೆ. ಇದನ್ನು ಸರಿದೂಗಿಸುವ ಸಲುವಾಗಿ ಕಂಪನಿಗಳು ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗುತ್ತಿದೆ. ಇನ್ನು ಬೆಲೆ ಏರಿಕೆ ಜೊತೆಗೇ ಕಡಿಮೆ ಮೌಲ್ಯದ ರೀ ಚಾರ್ಜ್ ಪ್ಯಾಕ್‌ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸುವ ಬಗ್ಗೆಯೂ ಕಂಪನಿಗಳು ಚಿಂತನೆ ನಡೆಸಿವೆ.

ಅಂಕಿಅಂಶಗಳ ಪ್ರಕಾರ ದೇಶದ ನಗರ ಪ್ರದೇಶಗಳಲ್ಲಿ 5ಜಿ ಸೇವೆಯ ಬಳಿಕ ಗ್ರಾಹಕರ ವೆಚ್ಚವು ಸದ್ಯ ಇರುವ 3.2 ಪ್ರತಿಶತದಿಂದ 3.5 ಪ್ರತಿಶತಕ್ಕೆ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ನಿರ್ವಹಣಾ ವೆಚ್ಚವು 5.2 ಪ್ರತಿಶತದಿಂದ 5.9 ಪ್ರತಿಶತಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!