ಮಹಿಳಾ ದಿನ ವಿಶೇಷ: ಬದುಕು ಸಬಲಗೊಳಿಸಿದ ನೇಯಿಗೆ ಕಾಯಕ!

– ಪ್ರಭಾವತಿ ಗೋವಿ

ಯಲ್ಲಾಪುರ: ಮಲೆನಾಡಿನಲ್ಲಿ ಸಾಮಾನ್ಯವಾಗಿ ಅಡಿಕೆ ತೋಟ, ಗದ್ದೆ, ಸಾ ಮಿಲ್, ಕೊಬ್ಬರಿಯಿಂದ ಎಣ್ಣೆ ತೆಗೆಯುವ ಸಣ್ಣಪುಟ್ಟ ಸ್ವ-ಉದ್ಯೋಗ ಮಾಡಿಕೊಂಡವರು ಕಂಡುಬರುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಮನೆಮಾತಾಗಿರುವ ಕಂಬಳಿ, ಸೀರೆ ನೇಯುವ ವಿದ್ಯುತ್ ಮಗ್ಗವನ್ನು ಮಹಿಳೆಯೊಬ್ಬಳು ಯಲ್ಲಾಪುರದಲ್ಲಿ ನಡೆಸುವ ಮೂಲಕ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ ಎನ್ನುವುದಕ್ಕೆ ನಿದರ್ಶನರಾಗಿದ್ದಾರೆ.

ಪಟ್ಟಣದ ಉದ್ಯಮನಗರದ ಸುಮಂಗಲ ಮಂಡಿಗೋಡ್ಲಿ ತಮ್ಮ ವಿದ್ಯುತ್ ಮಗ್ಗ ಕೇಂದ್ರದಲ್ಲಿ ಸ್ವತಃ ಸೀರೆ ನೇಯುವುದರೊಂದಿಗೆ ಯುವತಿರಿಗೂ ಹೊಲಿಗೆ ತರಬೇತಿ ಸಹ ನೀಡುತ್ತಿದ್ದಾರೆ. ಈ ಕಾರ್ಯದಲ್ಲಿ ಇವರ ಪತಿ ಪಾಂಡುರಂಗ ಮಂಡಿಗೋಡ್ಲಿ ಸಾಥ್ ನೀಡಿದ್ದಾರೆ. ಕಂಬಳಿ, ಸೀರೆ, ಟವಲ್ ನೇಯುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದಾರೆ.

ಮೂರು ಪವರಲೂಮ್ ಯಂತ್ರದಲ್ಲಿ ರೇಶ್ಮೆ ಹಾಗೂ ಕಾಟನ್ ಸೀರೆ ನೇಯುತ್ತಾರೆ. ಬೆಳಗಾವಿ, ರಾಣೆಬೆನ್ನೂರನಿಂದ ಕಚ್ಚಾ ವಸ್ತುಗಳನ್ನು ತರಿಸಿಕೊಂಡು, ಕೇಂದ್ರದಲ್ಲಿ ಸೀರೆ ನೇಯ್ದು ಅಂತಿಮ‌ ಸ್ಪರ್ಶ ನೀಡಲಾಗುತ್ತದೆ. ಇಂತಹ ಕೌಶಲ್ಯಭರಿತ ಕಾಯಕ ಉನ್ನತಗೊಳಿಸಲು ಪುತ್ರ, ಮಗಳು, ಸೊಸೆ ಎಲ್ಲರೂ ಕೈ ಜೋಡಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಗುರುತಿಸಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!