ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಫೈನಲ್ ಪಂದ್ಯದಲ್ಲಿ ಮುಂಬೈ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಎಡವಿದ್ದು, 131 ರನ್ ಸಿಡಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಉತ್ತಮ ಆರಂಭ ಸಿಗಲಿಲ್ಲ. ಶೆಫಾಲಿ ವರ್ಮಾ 11 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಅಲಿಸ್ ಕ್ಯಾಪ್ಸಿ ವಿಕೆಟ್ ಪತನಗೊಂಡಿತು. ಜೇಮಿಯ ರೋಡ್ರಿಗೆಸ್ 9 ರನ್ ಸಿಡಿಸಿ ನಿರ್ಗಮಿಸಿದರು.ಮರಿಜಾನ್ ಕ್ಯಾಪ್ 18 ರನ್ ಕಾಣಿಕೆ ನೀಡಿದರು. ಒಂದೆಡೆ ವಿಕೆಟ್ ಪತನವಾಗಿದ್ದರು, ನಾಯಕಿ ಮ್ಯಾಗ್ ಲ್ಯಾನಿಂಗ್ ದಿಟ್ಟ ಹೋರಾಟ ನೀಡಿದರು. 29 ಎಸೆತದಲ್ಲಿ 35 ರನ್ ಸಿಡಿಸಿ ಲ್ಯಾನಿಂಗ್ ವಿಕೆಟ್ ಕೈಚೆಲ್ಲಿದರು. ಅರುಂಧತಿ ರೆಡ್ಡಿ ಡಕೌಟ್ ಆದರು.
ಮಿನ್ನು ಮಣಿ ಹಾಗೂ ತಾನ್ಯಾ ಭಾಟಿಯಾ ಅಬ್ಬರಿಸಲಿಲ್ಲ. ರಾಧಾ ಯಾದವ್ ಹಾಗೂ ಶಿಖಾ ಪಾಂಡೆ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ 100ರ ಗಡಿ ದಾಟಿತು. ಶಿಖಾ ಪಾಂಡೆ 17 ಎಸೆತದಲ್ಲಿ ಅಜೇಯ 27 ರನ್ ಸಿಡಿಸಿದರು. ಇತ್ತ ರಾಧಾ ಯಾದವ್ 12 ಎಸೆತದಲ್ಲಿ ಅಜೇಯ 27 ರನ್ ಸಿಡಿಸಿದರು. ಈ ಮೂಲಕ 9 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು.