ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವುಮೆನ್ ಪ್ರೀಮಿಯರ್ ಕ್ರಿಕೆಟ್ ಲೀಗ್‌ಗೆ (WPL 2024) ಇಂದು ವರ್ಣರಂಜಿತ ಚಾಲನೆ ಸಿಕ್ಕಿದೆ.
ಮಹಿಳಾ ಕ್ರಿಕೆಟ್ ತಂಡಕ್ಕೆ ಬೆಂಬಲ ಸೂಚಿಸಲು ಶಾರುಖ್ ಖಾನ್ (Sharukh Khan) ಸೇರಿದಂತೆ ಅನೇಕ ಬಾಲಿವುಡ್ ನಟರು ಭಾಗಿಯಾಗಿ ಸಾಥ್ ನೀಡಿದ್ದಾರೆ.
ಬಾದಶಾ ಶಾರುಖ್ ಖಾನ್ ಜೊತೆ ಟೈಗರ್ ಶ್ರಾಫ್, ಶಾಹಿದ್ ಕಪೂರ್ (Shahid Kapoor), ವರುಣ್ ಧವನ್ (Varun Dhawan), ಸಿದ್ಧಾರ್ಥ್ ಮಲ್ಹೋತ್ರಾ ಕೂಡ ವುಮೆನ್ ಪ್ರೀಮಿಯರ್ ಕ್ರಿಕೆಟ್ ಲೀಗ್‌ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿದ್ದಾರೆ.
ಕಳೆದ ವರ್ಷ ವುಮೆನ್ ಪ್ರೀಮಿಯರ್ ಲೀಗ್ ಮುಂಬೈನಲ್ಲಿ ನಡೆದಿತ್ತು. ಈ ಬಾರಿ ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆಯಲಿದೆ. ಕಳೆದ ವರ್ಷದ ಫೈನಲಿಸ್ಟ್‌ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು (ಫೆ.23) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟ ಆಡ್ತಿದ್ದಾರೆ. ಅಂತಿಮ ಪಂದ್ಯ ಮಾರ್ಚ್ 17ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.