ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಕುರಿತಾಗಿ ಚರ್ಚೆ ಬಿರುಸಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕುರಿತು ಮಾತನಾಡಿದರು.
ಮಹಿಳಾ ಮೀಸಲಾತಿ ವಿಧೇಯಕ ಕುರಿತಾಗಿ ಲೋಕಸಭೆಯಲ್ಲಿ ತಮ್ಮ ನಿಲುವು ಮಂಡಿಸಿದ ಕೇಂದ್ರ ಶಾ, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲ್ಲ ಎಂದಿದ್ದಾರೆ. ಕೆಲವು ರಾಜಕೀಯ ಪಕ್ಷಗಳಿಗೆ ಮಹಿಳಾ ಸಬಲೀಕರಣ ರಾಜಕೀಯ ಅಜೆಂಡಾ ಆಗಿರಬಹುದು. ಆದರೆ, ಬಿಜೆಪಿ ಮಹಿಳಾ ಸಬಲೀಕರಣದ ವಿಚಾರದಲ್ಲಿ ನಾವು ರಾಜಕೀಯ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರಿಗೆ ಭದ್ರತೆ, ಗೌರವ, ಸಮಾನತೆ ಸಿಗಬೇಕಿದೆ. ಸಮಾಜದ ಎಲ್ಲ ರಂಗಗಳಲ್ಲೂ ಮಹಿಳಾ ಭಾಗೀದಾರಿಕೆ ಇರಬೇಕು ಅನ್ನೋದು ಬಿಜೆಪಿ ನಿಲವು ಹಾಗು ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಇದೇ ನಿಲುವನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಶಾ ಹೇಳಿದ್ಧಾರೆ.
ವಿಧೇಯಕ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಜಿ – 20 ಶೃಂಗ ಸಭೆಯಲ್ಲೂ ಪ್ರಧಾನಿ ಮೋದಿ ಅವರು ಮಹಿಳಾ ಮುಂದಾಳತ್ವದ ಪ್ರಗತಿಯ ದೂರದೃಷ್ಟಿಯನ್ನು ಪ್ರದರ್ಶಿಸಿದ್ದರು ಎಂದು ಅಮಿತ್ ಶಾ ತಿಳಿಸಿದ್ದಾರೆ.
ಕೆಲವು ರಾಜಕೀಯ ಪಕ್ಷಗಳಿಗೆ ಮಹಿಳಾ ಸಬಲೀಕರಣ ವಿಚಾರ ರಾಜಕೀಯ ಅಜೆಂಡಾ ಆಗಿರಬಹುದು. ಚುನಾವಣೆಯಲ್ಲಿ ಮಹಿಳೆಯರ ಮನ ಗೆಲ್ಲುವ ಅಸ್ತ್ರ ಕೂಡಾ ಆಗಿರಬಹುದು. ಆದರೆ, ಬಿಜೆಪಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇದು ಯಾವತ್ತಿಗೂ ರಾಜಕೀಯ ವಿಚಾರ ಆಗಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ಧಾರೆ.