May 20, 2026
Wednesday, May 20, 2026
spot_img

ದಿನಭವಿಷ್ಯ: ನಿಮ್ಮೆಡೆಗೆ ಅದ್ಭುತ ಅವಕಾಶ ಬರಲಿದೆ, ಸರಿಯಾಗಿ ಉಪಯೋಗಿಸಿಕೊಳ್ಳಿ

ಮೇಷ.
ಇಂದು ಹೆಚ್ಚು ಎಚ್ಚರ ಮತ್ತು ಕುಶಲತೆಯಿಂದ ನಿಮ್ಮ ಕಾರ್ಯವ್ಯವಹಾರ ನಡೆಸಿ. ವಿರೋಧಿಗಳು ನಿಮ್ಮ ವಿರುದ್ಧ ಮಸಲತ್ತು ನಡೆಸುತ್ತಾರೆ.   ವೃಷಭ
ನಿಮ್ಮ ಮಾತು ವಿವಾದ ಸೃಷ್ಟಿಸಬಹುದು. ಮಿತಮಾತು ಒಳಿತು. ನಿಮ್ಮ ಕಾರ್ಯದ ಬಗ್ಗೆ ಶ್ಲಾಘನೆ ಕೂಡಾ ಪಡೆಯುವಿರಿ. ಕೌಟುಂಬಿಕ ಸಾಮರಸ್ಯ.            
ಮಿಥುನ
ದಂಪತಿ ಮಧ್ಯೆ ಕಲಹ ನಡೆದೀತು. ಪರಸ್ಪರ ಸಹಕಾರ ಅವಶ್ಯ. ವೃತ್ತಿಯಲ್ಲಿ ನಿಮ್ಮ ಗುರಿ ಸಾಧನೆಗೆ ಕೆಲವು ಅಡ್ಡಿ. ಕೆಲವರ ಅಸಹಕಾರ.     ಕಟಕ
ನಿಮ್ಮೆಡೆಗೆ ಬರುವ ಅವಕಾಶ ಸರಿಯಾಗಿ ಬಳಸಿಕೊಳ್ಳಿ. ವ್ಯವಹಾರ ಸುಗಮ.  ಕೆಲವರ ಜತೆ  ಸಂಘರ್ಷ ನಡೆದೀತು. ತಾಳ್ಮೆಯ ನಡೆ ಅವಶ್ಯ.        
ಸಿಂಹ
ಸಹೋದ್ಯೋಗಿ ನಿಮ್ಮ ಜತೆ ಕಾರಣವಿಲ್ಲದೆ ಜಗಳ ತೆಗೆಯಬಹುದು. ಖರ್ಚು ಹಠಾತ್ತನೆ ಏರಿಕೆ. ಪ್ರಯಾಣದಲ್ಲಿ ವಿಳಂಬ, ಕಿರಿಕಿರಿ ಉಂಟಾದೀತು.      
ಕನ್ಯಾ
ಕೆಲದಿನಗಳ ಒತ್ತಡ ನಿವಾರಣೆ. ಕೆಲಸ ಸರಾಗ. ಹಣಕಾಸು ಅಡ್ಡಿ ಪರಿಹಾರ. ಬಂಧುಗಳ ಜತೆಗಿನ ಭೇಟಿ ಫಲಪ್ರದ. ಕೌಟುಂಬಿಕ ಸಹಕಾರ ಹೆಚ್ಚಲಿದೆ.                    
ತುಲಾ
ಆರ್ಥಿಕ ಚಿತ್ರಣ ತುಸು ಬದಲಾದೀತು. ಆತ್ಮೀಯರ ಜತೆ ವ್ಯವಹಾರದಲ್ಲಿ ಸಂಘರ್ಷ ಉಂಟಾದೀತು. ಎಚ್ಚರದ ಹೆಜ್ಜೆ ಇಡುವುದೊಳಿತು.     ವೃಶ್ಚಿಕ
ಎಂದಿಗಿಂತ ಭಿನ್ನ ದಿನ. ಬಂಧುಗಳ ಆಗಮನದಿಂದ ಖುಷಿ. ಉದ್ಯೋಗದಲ್ಲಿ ಉನ್ನತಿ. ಆರ್ಥಿಕ ಪರಿಸ್ಥಿತಿ ತೃಪ್ತಿಕರ ಬೆಳವಣಿಗೆ.          
ಧನು
ಹರ್ಷದ ದಿನ. ಅನ್ಯರು ನಿಮಗೆ ಗೌರವ ಸಲ್ಲಿಸುವ ಸಾಧನೆ ತೋರುವಿರಿ. ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಲಭಿಸಲಿದೆ.            
ಮಕರ
ನಿಮಗೆ ಅನಾದರ ತೋರುವ ವ್ಯಕ್ತಿಗಳನ್ನು ಒಲಿಸಲು ಹೋಗಬೇಡಿ. ಕಡೆಗಣಿಸಿಬಿಡಿ. ಆರ್ಥಿಕ ಪರಿಸ್ಥಿತಿ ಉತ್ತಮ. ವ್ಯವಹಾರದಲ್ಲಿ ಪ್ರಗತಿ.  
ಕುಂಭ
ನಿಮ್ಮ ಕೆಲಸ, ಪ್ರಗತಿ ನಿಧಾನಗತಿ ತೋರಲಿದೆ. ಅಪೇಕ್ಷಿಸಿದ ಫಲ ಸಿಗದು.ಸಣ್ಣದೊಂದು ವಿಷಯ ನಿರಂತರ ಕೊರಗು ಉಂಟುಮಾಡುವುದು. ಮೀನ
ಇಂದು ನಿರೀಕ್ಷಿತ ಫಲ ದೊರಕದು. ಸ್ವಲ್ಪ ಮಟ್ಟಿನ ನಿರಾಶೆ ಎದುರಿಸುವಿರಿ. ಆತ್ಮೀಯರು ಮುನಿಸು ತೋರಿಯಾರು. ತಾಳ್ಮೆ ಯಿಂದ ವ್ಯವಹರಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !