ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಪೊಚ್ ಇನ್ವಿಟೇಷನಲ್ ಟ್ರ್ಯಾಕ್ ಈವೆಂಟ್ ನಲ್ಲಿ ನೀರಜ್ ಚೋಪ್ರಾ ಮಹತ್ತದ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್ (World Athletics Continental Tour Challenger) ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಸೇರಿ 6 ಸ್ಪರ್ಧಿಗಳ ನಡುವೆ ಪೈಪೋಟಿ ಇತ್ತು. ಇದರಲ್ಲಿ ನೀರಜ್ ಚೋಪ್ರಾಗೆ ಸೌತ್ ಆಫ್ರಿಕಾದ 25 ವರ್ಷದ ಯುವ ಜಾವೆಲಿನ್ ಎಸೆತಗಾರ ಡೌ ಸ್ಮಿತ್ ಕಠಿಣ ಪೈಪೋಟಿ ಕೊಟ್ಟರು.
ನೀರಜ್ ಚೋಪ್ರಾ ಅವರು ಸ್ಪರ್ಧೆಯಲ್ಲಿ ಒಟ್ಟು 84.52 ಮೀಟರ್ ದೂರ ಈಟಿ ಎಸೆಯುವ ಮೂಲಕ ಗೋಲ್ಡ್ ಮೆಡಲ್ಗೆ ಮುತ್ತಿಕ್ಕಿದರು. ಅದರಂತೆ ಆಫ್ರಿಕಾದ ಡೌ ಸ್ಮಿತ್ ಅವರು 82.44 ಮೀಟರ್ ದೂರ ಎಸೆದು ಚೋಪ್ರಾಗೆ ಸವಾಲಾಗಿದ್ದರು.