Tuesday, March 28, 2023

Latest Posts

ವಿಶ್ವ ಕ್ಯಾನ್ಸರ್ ದಿನ 2023: ದಿನಾಂಕ, ಥೀಮ್, ಇತಿಹಾಸ ಮತ್ತು ಮಹತ್ವ ತಿಳಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕ್ಯಾನ್ಸರ್ ಎನ್ನುವುದು ಮಾನವ ದೇಹದ ಯಾವುದೇ ಅಂಗ ಅಥವಾ ಅಂಗಾಂಶದ ಮೇಲೆ ದಾಳಿ ಮಾಡುವ ರೋಗಗಳ ಒಂದು ದೊಡ್ಡ ಗುಂಪು. ಕ್ಯಾನ್ಸರ್ ಕೋಶಗಳು ದೇಹದ ಭಾಗಗಳನ್ನು ಆಕ್ರಮಿಸುವ ಮೂಲಕ ಜೀವಕೋಶಗಳು ಅಸಹಜ ಮತ್ತು ನಿಯಂತ್ರಣವನ್ನು ತಪ್ಪಿ ಹೋಗುತ್ತವೆ. ಆ ಸಮಯದಲ್ಲಿ ಪತ್ತೆ ಮಾಡದಿದ್ದರೆ, ಇದು ಮಾನವನ ಪ್ರಾಣಹಾನಿಗೆ ಕಾರಣವಾಗುತ್ತದೆ.

ಕ್ಯಾನ್ಸರ್ ಜಾಗತಿಕವಾಗಿ ಸಾವಿಗೆ ಕಾರಣವಾಗುವ ಎರಡನೇ ಪ್ರಮುಖ ಕಾಯಿಲೆಯಾಗಿದೆ. ಒಬ್ಬ ಕ್ಯಾನ್ಸರ್‌ ರೋಗಿಯು ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕವಾಗಿ ಒತ್ತಡವನ್ನು ಅನುಭವಿಸುತ್ತಾನೆ.
ಆದ್ದರಿಂದ ಕ್ಯಾನ್ಸರ್-ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸರ್ಕಾರ ಆರೋಗ್ಯ ವೃತ್ತಿಪರರು ಮತ್ತು ಸಾರ್ವಜನಿಕರಂತಹ ವಿವಿಧ ಪಾಲುದಾರರನ್ನು ಜಾಗತಿಕವಾಗಿ ಕ್ಯಾನ್ಸರ್ ಅನ್ನು ಕಡಿಮೆ ಮಾಡುವ ಏಕೈಕ ಗುರಿಯ ಮೇಲೆ ಕೆಲಸ ಮಾಡುವ ಗುರಿಯನ್ನು ಹೊಂದಿದೆ. ಬನ್ನಿ ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್‌ ಅನ್ನು ತಿಳಿಯೋಣ.

ವಿಶ್ವ ಕ್ಯಾನ್ಸರ್ ದಿನ 2023 ಇತಿಹಾಸ :
ಫೆಬ್ರವರಿ 4, 2000 ರಲ್ಲಿ ವಿಶ್ವ ಕ್ಯಾನ್ಸರ್ ದಿನವು ವಿಶ್ವ ಶೃಂಗಸಭೆಯಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಶೃಂಗಸಭೆಯು ಪ್ಯಾರಿಸ್‌ನಲ್ಲಿ ನಡೆಯಿತು ಮತ್ತು ಇದನ್ನು ಯೂನಿಯನ್ ಫಾರ್ ಇಂಟರ್‌ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿಸಿ) ಸ್ಥಾಪಿಸಿತ್ತು.

ಯೂನಿಯನ್ ಫಾರ್ ಇಂಟರ್‌ನ್ಯಾಶನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿಸಿ) ಎಂಬುದು ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಜನರಲ್ಲಿ ಜಾಗೃತಿ ಮೂಡಿಸಲು ಕೆಲಸ ಮಾಡುವ ಸಂಸ್ಥೆಯಾಗಿದೆ.

ವಿಶ್ವ ಕ್ಯಾನ್ಸರ್ ದಿನ 2023 ಮಹತ್ವ :
ಕ್ಯಾನ್ಸರ್‌ನ ಜಾಗತಿಕ ಪರಿಣಾಮವನ್ನು ಪರಿಹರಿಸಲು ರಾಷ್ಟ್ರಗಳಾದ್ಯಂತ ಅಭಿಯಾನಗಳನ್ನು ರಚಿಸುವುದರೊಂದಿಗೆ ದಿನವು ಪ್ರಾರಂಭವಾಗುತ್ತದೆ. ಈ ಅಭಿಯಾನವು ಸಮಾನ ಮನಸ್ಕ ಜನರನ್ನು ಒಂದುಗೂಡಿಸಿ ಅದರ ಪರಿಣಾಮದ ಕುರಿತು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಈ ರೀತಿಯ ಪ್ರಯತ್ನವು ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್ ಅನ್ನು ವೇಗವಾಗಿ ಪರಿಹರಿಸಲು ಉತ್ತೇಜನವನ್ನು ನೀಡುತ್ತದೆ.

ವಿಶ್ವ ಕ್ಯಾನ್ಸರ್ ದಿನ 2023 ಥೀಮ್ :
2022-2024ರ ವಿಶ್ವ ಕ್ಯಾನ್ಸರ್ ದಿನದ ಬಹು-ವರ್ಷದ ಥೀಮ್ ‘ಕ್ಲೋಸ್ ದಿ ಕೇರ್ ಗ್ಯಾಪ್. ‘ಇದು ಮೂರು ವರ್ಷಗಳ ಈ ಅವಧಿಯಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ, ಅದರ ಚಿಕಿತ್ಸೆಯ ಬಗ್ಗೆ ತಿಳಿಸುವ ಉದ್ದೇಶವನ್ನು ಹೊಂದಲಾಗಿದೆ. ಜಾಗತಿಕವಾಗಿ ಇರುವ ಅಸಮಾನತೆಯನ್ನು ಹೋಗಲಾಡಿಸಿ ಕ್ಯಾನ್ಸರ್ ರೋಗಿಗಳಲ್ಲಿ ಜೀವನೋತ್ಸಾಹ ತುಂಬವ ಗುರಿಯನ್ನು ಹೊಂದಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!