FIFA WORLD CUP 2022| ಅಂತಿಮ ಹಂತದಲ್ಲಿ ಫಿಫಾ ವಿಶ್ವಕಪ್: ಕತಾರ್ ಖಾಲಿ ಖಾಲಿ, ಭಣಗುಡುತ್ತಿರುವ ಹೊಟೇಲ್‌ಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

FIFA World Cup-2022 ಸಂದರ್ಭದಲ್ಲಿ, ಒಂದು ತಿಂಗಳಿಂದ ಬಿಡುವಿಲ್ಲದೆ ಜನರಿಂದ ಗಿಜಿಗುಡುತ್ತಿದ್ದ ಕತಾರ್ ಈಗ ಖಾಲಿ ಖಾಲಿ ಎನಿಸಲು ಶುರುವಾಗಿದೆ. ನಿನ್ನೆಯವರೆಗೂ ಜನರಿಂದ ತುಂಬಿ ತುಳುಕುತ್ತಿದ್ದ ಕತಾರ್ ಈಗ ಖಾಲಿ ಖಾಲಿಯಾಗಿದೆ. ಇದರೊಂದಿಗೆ ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಭಣಗುಡುತ್ತಿವೆ.

ಈಗಾಗಲೇ ಸೆಮಿಫೈನಲ್ ಪಂದ್ಯಗಳು ಮುಗಿದಿರುವುದರಿಂದ ಎಲ್ಲಾ ತಂಡಗಳು ತಮ್ಮ ತಮ್ಮ ದೇಶಗಳಿಗೆ ತೆರಳಿದ್ದು, ಆಯಾ ದೇಶಗಳ ಅಭಿಮಾನಿಗಳೂ ವಾಪಸಾಗಿದ್ದಾರೆ. ಇಂದು ಫೈನಲ್‌ ಪಂದ್ಯ ನಡೆಯಲಿದ್ದು, ನಿರೀಕ್ಷೆಗೂ ಮೀರಿದ ಜನರು ಮಾತ್ರ ಇದಿಘ ಕತಾರ್‌ನಲ್ಲಿಲ್ಲ.  ಕತಾರ್ ಹನ್ನೆರಡು ವರ್ಷಗಳಿಂದ ಈ ಪಂದ್ಯಾವಳಿಗಾಗಿ ವ್ಯವಸ್ಥೆಗಳನ್ನು ಮಾಡಿದ್ದು, ಇದಕ್ಕಾಗಿ 300 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಇಷ್ಟು ಚಿಕ್ಕ ದೇಶ ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದಕ್ಕೆ ಹಲವು ಟೀಕೆಗಳೂ ವ್ಯಕ್ತವಾಗಿವೆ. ಆದರೆ, ಕತಾರ್ ಹಿಂದೆ ಸರಿಯದೆ ಬೃಹತ್ ಕ್ರೀಡಾಂಗಣಗಳು ಮತ್ತು ಹೋಟೆಲ್ ನಿರ್ಮಾಣ ಮಾಡಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಿಎದವಹಿಸಲು ಅನುವು ಮಾಡಿದೆ.

ಆದರೆ, ಇವೆಲ್ಲವೂ ಕತಾರ್‌ಗೆ ಎಷ್ಟರ ಮಟ್ಟಿಗೆ ಲಾಭ ತಂದುಕೊಟ್ಟಿವೆ ಎಂಬುದು ನಿಜವಾದ ಪ್ರಶ್ನೆ. ಈ ಪಂದ್ಯಾವಳಿಗೆ ಅಂದಾಜು ಏಳು ಲಕ್ಷ ಜನರು ಕತಾರ್‌ಗೆ ಬಂದಿದ್ದರು ಎನ್ನಲಾಗಿದೆ. ಟೂರ್ನಮೆಂಟ್ ಮುಗಿದ ಮೇಲೆ ಅವರೆಲ್ಲ ಈಗ ಕತಾರ್ ತೊರೆಯುತ್ತಿದ್ದಾರೆ. ಮತ್ತೊಂದೆಡೆ, ಕೆಲಸಕ್ಕಾಗಿ ಅಲ್ಲಿಗೆ ಬಂದ ವಲಸೆ ಕಾರ್ಮಿಕರೂ ದೇಶ ಬಿಟ್ಟು ಹೋಗುತ್ತಿದ್ದಾರೆ. ಏಕೆಂದರೆ ಇಲ್ಲಿಯವರೆಗೆ, ಈ ಪಂದ್ಯಾವಳಿಗಾಗಿ ಕೈಗೊಂಡ ನಿರ್ಮಾಣಗಳಿಂದಾಗಿ ಉದ್ಯೋಗವಿತ್ತು. ಇದೀಗ ಯಾವುದೇ ಕೆಲಸ ಕಾರ್ಯಗಳಿಲ್ಲದ ಕಾರಣ ಅವರೂ ದೇಶ ಬಿಟ್ಟು ಹೋಗುತ್ತಿದ್ದಾರೆ. ನಿರ್ಮಿಸಲಾದ ಎಲ್ಲಾ ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳು ಮತ್ತು ಅತಿಥಿ ಕೊಠಡಿಗಳು ಖಾಲಿಯಾಗಿವೆ.

ಇದರಿಂದ ರಿಯಲ್ ಎಸ್ಟೇಟ್ ವ್ಯಾಪಾರಿಗಳು, ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಟೂರ್ನಿಗಾಗಿ ನಿರ್ಮಿಸಿರುವ ಸೌಲಭ್ಯಗಳನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಕತಾರ್ ಸಿದ್ಧತೆ ನಡೆಸಿದೆ. ಕೆಲವು ಕ್ರೀಡಾಂಗಣಗಳನ್ನು ಸಣ್ಣ ಕ್ರೀಡಾಂಗಣಗಳಾಗಿ ಪರಿವರ್ತಿಸಲು ಯೋಚಿಸಿ ಇತರ ಪಂದ್ಯಾವಳಿಗಳನ್ನು ಆಯೋಜಿಸಲು ಪ್ಲಾನ್‌ ಮಾಡುತ್ತಿದೆ ಎನ್ನಲಾಗಿದೆ. ಫಿಫಾ ವಿಶ್ವಕಪ್ ನಿಂದ ಕತಾರ್ ಗೆ ಲಾಭವಾಗಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!