ODI WORLD CUP | ಇಂದಿನಿಂದ ವಿಶ್ವಕಪ್ ಫೀವರ್ ಶುರು, ಮೊದಲ ಪಂದ್ಯ ಎಷ್ಟೊತ್ತಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ವಿಶ್ವಕಪ್ ಮೆಗಾ ಟೂರ್ನಿ ಆರಂಭವಾಗಲಿದೆ, 10 ತಂಡಗಳು ಹೋರಾಡೋಕೆ ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ಕ್ರಿಕೆಟ್ ಕ್ರೇಝ್ ಜೋರಾಗಿದೆ.

ಒಟ್ಟಾರೆ 10 ಮೈದಾನಗಳಲ್ಲಿ, 45 ದಿನಗಳಲ್ಲಿ, 48 ಪಂದ್ಯಗಳು ನಡೆಯಲಿದೆ. ಈ ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಯಾರಾಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

ಇಂದು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಪಂದ್ಯ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಮ್ಯಾಚ್ ಶುರುವಾಗಲಿದೆ.

ಈ ಬಾರಿ ತವರಿನಲ್ಲೇ ವರ್ಲ್ಡ್‌ಕಪ್ ನಡೆಯುತ್ತಿರುವ ಕಾರಣ ಟೀಂ ಇಂಡಿಯಾಗೆ ಹುಮ್ಮಸ್ಸು ಹೆಚ್ಚಿದೆ, ಈಗಾಗಲೇ 1983 ಹಾಗೂ 2011ರಲ್ಲಿ ಭಾರತ ಟ್ರೋಫಿ ಗೆದ್ದು ಬೀಗಿತ್ತು, ಈ ಬಾರಿ ರೋಹಿತ್ ಪಡೆಗೆ ಗೆಲುವು ಸಿಗಲಿ ಎಂದು ಅಭಿಮಾನಿಗಳು ಆಶಿಸ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!