ಹೊಸದಿಗಂತ ಡಿಜಿಟಲ್ ಡೆಸ್ಕ್:
1982ರಲ್ಲಿ ರಿಚರ್ಡ್ ಅಟೆನ್ಬರೋ ಅವರ ‘ಗಾಂಧಿ’ ಸಿನಿಮಾ ನಿರ್ಮಾಣವಾಗುವವರೆಗೂ ಜಗತ್ತಿನಲ್ಲಿ ಯಾರಿಗೂ ಮಹಾತ್ಮ ಗಾಂಧಿ ಬಗ್ಗೆ ತಿಳಿದಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮೋದಿ, ಕಳೆದ 75 ವರ್ಷಗಳಲ್ಲಿ ಗಾಂಧಿಯವರ ಉನ್ನತ ಜಾಗತಿಕ ಖ್ಯಾತಿಯನ್ನು ಭದ್ರಪಡಿಸುವುದು ದೇಶದ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಮಹಾತ್ಮ ಗಾಂಧಿಗೆ ಅರ್ಹವಾದ ರೀತಿಯಲ್ಲಿ ಪ್ರಚಾರ ಮಾಡಲಿಲ್ಲ ಎಂದು ಟೀಕಿಸಿದರು.
ಮಹಾತ್ಮಾ ಗಾಂಧಿಯವರು ಜಗತ್ತಿನ ಮಹಾನ್ ಚೇತನ, ಈ 75 ವರ್ಷಗಳಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಜಗತ್ತಿಗೆ ತಿಳಿಸುವುದು ನಮ್ಮ ಜವಾಬ್ದಾರಿಯಲ್ಲವೇ? ಅವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ, ಕ್ಷಮಿಸಿ, ಆದರೆ ಜಗತ್ತಿನಲ್ಲಿ ಅವರ ಬಗ್ಗೆ ಮೊದಲ ಬಾರಿಗೆ ಕುತೂಹಲ ಹುಟ್ಟಿತು. ‘ಗಾಂಧಿ’ ಚಿತ್ರ ನಿರ್ಮಾಣವಾದಾಗ ಜಗತ್ತಿನ ಜನರಿಗೆ ಗಾಂಧೀಜಿ ಬಗ್ಗೆ ಗೊತ್ತಾಯಿತು. ಆದರೆ, ಭಾರತೀಯರಾದ ನಮಗೆ ಗಾಂಧೀಜಿಯ ಬಗ್ಗೆ ತಿಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.