ಜಗತ್ತಿನಲ್ಲೀಗ ಎಲೆಕ್ಷನ್ ಋತು

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಈ ವಾರಾಂತ್ಯಕ್ಕೆ ಫ್ರಾನ್ಸ್ ಅಧ್ಯಕ್ಷ ಪದವಿ ನಿರ್ಧರಿಸುವ ಚುನಾವಣೆಯ ಮೊದಲ ಹಂತದ ನಡೆಯಲಿದೆ.

ಹಂಗರಿ, ಕೋಸ್ಟರಿಕಾ, ಸರ್ಬಿಯಾ ದೇಶಗಳಲ್ಲಿ ಚುನಾವಣೆ ನಡೆದಿದ್ದು ಫಲಿತಾಂಶಕ್ಕಾಗಿ ಎದುರುನೋಡಲಾಗುತ್ತಿದೆ.

ಪಾಕಿಸ್ತಾನದಲ್ಲಿ ಸಹ ಚುನಾವಣೆಗಳು ನಡೆಯುವ ಸ್ಥಿತಿಯನ್ನು ಇಮ್ರಾನ್ ಖಾನ್ ಸೃಷ್ಟಿಸಿದ್ದಾರೆ. ಆದರೆ ಅಲ್ಲಿ ಸೇನೆಯೋ ಅಥವಾ ಮತ್ತೆ ಬಾಯ್ಮಾತಿನ ಪ್ರಜಾಪ್ರಭುತ್ವವೋ ಎಂಬ ಗೊಂದಲವಿನ್ನೂ ಮುಂದುವರಿದಿದೆ.

ಫ್ರಾನ್ಸ್ ಚುನಾವಣೆ ಈ ಬಾರಿ ವಿಶೇಷ. ಏಕೆಂದರೆ ಈ ಬಾರಿ ಕಣದಲ್ಲಿರುವವರೆಲ್ಲರೂ ಬಲಪಂಥೀಯರೇ. ಮತ್ತೆ ಚುನಾಯಿತರಾಗುವುದಕ್ಕೆ ಕಣದಲ್ಲಿರುವ ಇಮ್ಯಾನುಲ್ ಮೆಕ್ರಾನ್ ಸಹ ಅಲ್ಲಿನ ರಾಜಕಾರಣದಲ್ಲಿ ಬಲಪಂಥೀಯರೆಂದೇ ಗುರುತಿಸಿಕೊಂಡವರು. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧದಂಥ ಕ್ರಮಗಳಾಗಿದ್ದು ಇವರ ಅವಧಿಯಲ್ಲೇ.

ಆದರೆ, ಇವರ ಎದುರಿಗೆ ಇನ್ನೂ ಇಬ್ಬರು ತೀವ್ರ ಬಲಪಂಥೀಯವಾದಿಗಳು ಸೆಣೆಸುತ್ತಿದ್ದಾರೆ. ಲೆ ಪೆನ್ ಎಂಬಾಕೆ ಬಲಪಂಥೀಯ ನಿಲುವುಗಳ ಜತೆ ಫ್ರಾನ್ಸ್ ನಲ್ಲಿ ಏರುತ್ತಿರುವ ಹಣದುಬ್ಬರದ ವಿರುದ್ಧವೂ ಪ್ರಚಾರ ಮುಂಚೂಣಿಯಲ್ಲಿದ್ದಾರೆ.

ಇನ್ನೊಬ್ಬ ಬಲಪಂಥೀಯ ಎರಿಕ್ ಜೆಮ್ಮುರ್ ಅಂತೂ ಈಗಿರುವ ಸ್ಥಿತಿಯಲ್ಲಿ ಫ್ರಾನ್ಸ್ ಮುಂದುವರಿದರೆ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿಬಿಡುತ್ತದೆ ಎಚ್ಚರ ಎಂದೇ ತಮ್ಮ ಪ್ರಚಾರ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!