ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿ, ಈ ಬಾರಿಯೂ ಚಿನ್ನದ ಅಂಬಾರಿ ಹೊರಲಿದ್ದಾನೆ ಅಭಿಮನ್ಯು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿ ಕಣ್ತುಂಬಿಕೊಳ್ಳುವ ಕ್ಷಣ ಬಂದೇ ಬಿಡ್ತು. ಇಂದು ಸಂಜೆ 4.40ರಿಂದ 5 ಗಂಟೆ ನಡುವೆ ಸಲ್ಲುವ ಶುಭ ಲಗ್ನದಲ್ಲಿ ನಾಡದೊರೆ ಸಿದ್ದರಾಮಯ್ಯ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಮೈಸೂರು ರಾಜಮನೆತನದ ಗತವೈಭವ ಮರುಕಳಿಸುತ್ತಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮದ ವಿಜಯದಶಮಿ ಹಬ್ಬ ಕಳೆಗಟ್ಟಿದೆ.

ಸತತವಾಗಿ ಮೂರು ಬಾರಿ ಅಂಬಾರಿ ಹೊತ್ತು ಹ್ಯಾಟ್ರಿಕ್‌ ಸಾಧಿಸಿರುವ ಅಭಿಮನ್ಯು, ಈ ಬಾರಿಯೂ 750ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ. ಚಿನ್ನದ ಅಂಬಾರಿಯಲ್ಲಿ ವಿರಾಜಮನಳಾಗಿ ತಾಯಿ ಚಾಮುಂಡೇಶ್ವರಿ ಭಕ್ತವೃಂದಕ್ಕೆ ದರುಶನ ಭಾಗ್ಯ ಕರುಣಿಸಲಿದ್ದಾಳೆ. ಇವತ್ತಿನ ಜಂಬೂಸವಾರಿಯಲ್ಲಿ 14 ಆನೆಗಳು ಹಾಗೂ 47 ಸ್ತಬ್ದಚಿತ್ರಗಳೊಂದಿಗೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.

ರಾಜ್ಯದಲ್ಲಿ ಬರದ ಛಾಯೆಯ ನಡುವೆಯೂ ಮೈಸೂರು ದಸರಾ ಉತ್ಸವ ಯಾವುದೇ ಅಡ್ಡಯಿಲ್ಲದೆ ನಡೆಯುತ್ತಿದೆ. ಇಂದಿನ ಜಂಬೂಸವಾರಿಯನ್ನು ನೋಡಲು ದೇಶ-ವಿದೇಶಗಳಿಂದ ಭಕ್ತರು ಮೈಸೂರಿಗೆ ಬಂದಿದ್ದಾರೆ. ಮೈಸೂರಿನ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಮೆರವಣಿಗೆ ಹೊರಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!