ಪ್ರತಿ ವರ್ಷ ಫೆಬ್ರವರಿ 27ರಂದು ವಿಶ್ವ ಎನ್‌ಜಿಒ ದಿನವನ್ನು ಆಚರಿಸಲಾಗುತ್ತದೆ. ಸಮಾಜದ ಅಭಿವೃದ್ಧಿ, ಮಾನವ ಹಕ್ಕುಗಳ ರಕ್ಷಣೆ, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುವ ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒ) ಸೇವೆಯನ್ನು ಗೌರವಿಸಲು ಈ ದಿನವನ್ನು ಸಮರ್ಪಿಸಲಾಗಿದೆ.
ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುವ ಎನ್‌ಜಿಒಗಳು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತವೆ.
2010 ರಲ್ಲಿ ಬಾಲ್ಟಿಕ್ ಪೂರ್ವ ರಾಜ್ಯಗಳಲ್ಲಿ ಬಾಲ್ಟಿಕ್ ಸೀ NGO ಫೋರಮ್‌ನ ಪ್ರತಿನಿಧಿಯಿಂದ NGO ದಿನವನ್ನು ಘೋಷಣೆ ಮಾಡಲಾಯಿತು. ನಂತರದಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಫೆಬ್ರವರಿ ಮೊದಲ ವಾರವನ್ನು ವಿಶ್ವ ಎನ್‌ಜಿಒ ವೀಕ್ ಎಂದು ಘೋಷಿಸಲಾಯಿತು. 2014 ರಂದು ಮೊದಲ ಬಾರಿಗೆ ವಿಶ್ವ ಎನ್‌ಜಿಒ ದಿನವನ್ನು ಆಚರಣೆ ಮಾಡಲಾಯಿತು. ಈ ದಿನದ ಉದ್ದೇಶ ವಿಶ್ವದಾದ್ಯಂತ ಕಾರ್ಯನಿರ್ವಹಿಸುವ ಸ್ವಯಂಸೇವಾ ಸಂಸ್ಥೆಗಳ ಸಾಧನೆಗಳನ್ನು ಹಂಚಿಕೊಳ್ಳುವುದು ಮತ್ತು ಅವರ ಸೇವೆಗೆ ಮಾನ್ಯತೆ ನೀಡುವುದಾಗಿದೆ.
ಇದನ್ನೂ ಓದಿ:
ಎನ್‌ಜಿಒಗಳು ಸಮಾಜದ ಬಡವರು, ಹಿಂದುಳಿದವರು ಮತ್ತು ಅಸಹಾಯಕರಿಗೆ ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪ್ರಕೃತಿ ವಿಕೋಪಗಳು, ಆರೋಗ್ಯ ಸಂಕಷ್ಟಗಳು ಅಥವಾ ಸಾಮಾಜಿಕ ಅನ್ಯಾಯಗಳ ಸಂದರ್ಭದಲ್ಲಿ ಇವು ತಕ್ಷಣ ಸ್ಪಂದಿಸುತ್ತವೆ. ಈ ದಿನವು ಎನ್‌ಜಿಒಗಳ ಕಾರ್ಯಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೂ ಸಹಕಾರಿ. ಜೊತೆಗೆ ಯುವಜನರನ್ನು ಸಮಾಜಸೇವೆಗೆ ಪ್ರೇರೇಪಿಸುವ ವೇದಿಕೆಯೂ ಆಗಿದೆ.
ವಿಶ್ವ ಎನ್‌ಜಿಒ ದಿನವು ಕೇವಲ ಆಚರಣೆಯ ದಿನವಲ್ಲ, ಸಮಾಜದಲ್ಲಿ ಬದಲಾವಣೆ ತರುವ ಶಕ್ತಿಯನ್ನೊಳಗೊಂಡ ಸಂಸ್ಥೆಗಳ ಸೇವೆಯನ್ನು ಗುರುತಿಸುವ ಅವಕಾಶವೂ ಹೌದು.



