ಜಗತ್ತು ಮೂರನೇ ಮಹಾಯುದ್ಧದಿಂದ ಒಂದು ಹೆಜ್ಜೆ ದೂರ: ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: 

5 ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಅವರು ಆಯ್ಕೆಯಾಗಿದ್ದಾರೆ . ಪುಟಿನ್ ಶೇ.88ರಷ್ಟು ಮತಗಳನ್ನು ಪಡೆದು ದಾಖಲೆ ಬರೆದಿದ್ದಾರೆ. ಪ್ರತಿಸ್ಪರ್ಧಿ ನಿಕೊಲಾಯ್ ಕೇವಲ 4 ಪ್ರತಿಶತ ಮತಗಳನ್ನು ಪಡೆದರು.

ಈ ಸಂದರ್ಭ ಮಾತನಾಡಿದ ಪುಟಿನ್ , ನಿಮ್ಮ ಬೆಂಬಲ ಮತ್ತು ವಿಶ್ವಾಸಕ್ಕಾಗಿ ದೇಶದ ಎಲ್ಲಾ ನಾಗರಿಕರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಯಾರು ಅಥವಾ ಎಷ್ಟು ನಮ್ಮನ್ನು ಹೆದರಿಸಲು ಬಯಸುತ್ತಾರೆ ಎಂಬುದು ಮುಖ್ಯವಲ್ಲ, ಯಾರು ಅಥವಾ ಎಷ್ಟು ನಮ್ಮನ್ನು, ನಮ್ಮ ಇಚ್ಛೆಯನ್ನು, ನಮ್ಮ ಪ್ರಜ್ಞೆಯನ್ನು ನಿಗ್ರಹಿಸಲು ಬಯಸುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ಇತಿಹಾಸದಲ್ಲಿ ಯಾರೂ ಈ ರೀತಿ ಯಶಸ್ವಿಯಾಗಿರಲಿಲ್ಲ ಎಂದರು.

ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಮಿಲಿಟರಿ ಮೈತ್ರಿಕೂಟದ ನಡುವೆ ಸಂಘರ್ಷ ಏರ್ಪಟ್ಟರೆ ಮೂರನೇ ಮಹಾಯುದ್ಧದ ಅಪಾಯವಿದೆ . ಅಂದರೆ ಜಗತ್ತು ಮೂರನೇ ಮಹಾಯುದ್ಧದಿಂದ ಒಂದು ಹೆಜ್ಜೆ ದೂರದಲ್ಲಿದೆ ಎಂದರ್ಥ ಎಂದು ಹೇಳಿದರು. ಆದರೆ ಯಾರಾದರೂ ಅಂತಹದನ್ನು ಬಯಸುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ತಿಳಿಸಿದರು.

ಪುಟಿನ್ ಅವರು 2000 ರಲ್ಲಿ ಮೊದಲ ಬಾರಿಗೆ ರಷ್ಯಾದ ಅಧ್ಯಕ್ಷರಾದರು. ಅವರು 2008 ರಲ್ಲಿ ಹುದ್ದೆಯಿಂದ ಕೆಳಗಿಳಿದರು. 2012 ರಲ್ಲಿ ಅವರು ಗೆದ್ದ ನಂತರ, ಅವರು ನಿರಂತರವಾಗಿ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. ಹಿಂದೆ ರಷ್ಯಾದಲ್ಲಿ ಯಾರೂ ಎರಡು ಬಾರಿ ಅಧ್ಯಕ್ಷ ಸ್ಥಾನವನ್ನು ಹೊಂದಲು ಸಾಧ್ಯವಾಗಲಿಲ್ಲ. ಅಧಿಕಾರಾವಧಿ 4 ವರ್ಷಗಳಾಗಿತ್ತು. ಆದರೆ ನವೆಂಬರ್ 2008 ರಲ್ಲಿ, ಡಿಮಿಟ್ರಿ ಸಂವಿಧಾನವನ್ನು ತಿದ್ದುಪಡಿ ಮಾಡಿದರು ಮತ್ತು ಅಧ್ಯಕ್ಷರ ಅವಧಿಯನ್ನು 4 ರಿಂದ 6 ವರ್ಷಗಳಿಗೆ ಹೆಚ್ಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!