ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಅಥ್ಲೀಟ್ ಒಬ್ಬರು ‘100 ಮೀಟರ್ ಸ್ಲಾಕ್‌ಲೈನ್ ವಾಕ್’ನಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಶಿ ಹೈಲಿನ್ ಎರಡು ಬೆಟ್ಟಗಳ ನಡುವೆ ನೆಲದಿಂದ 100 ಮೀಟರ್ ಎತ್ತರದ ಸ್ಲಾಕ್‌ಲೈನ್‌ನಲ್ಲಿ ಕೇವಲ 1 ನಿಮಿಷ 14.198 ಸೆಕೆಂಡುಗಳಲ್ಲಿ ನಡೆದು ಈ ಸಾಧನೆ ಮಾಡಿದರು. ಇದರೊಂದಿಗೆ 2016ರಲ್ಲಿ ಫ್ರಾನ್ಸ್‌ನ ಲೂಕಾಸ್ ಮಿಲಿಯಾರ್ಡ್ ಹೊಂದಿದ್ದ 1 ನಿಮಿಷ 59.73 ಸೆಕೆಂಡ್‌ಗಳ ದಾಖಲೆಯನ್ನು ಮುರಿದಿದ್ದಾರೆ.
ವಿಶ್ವ ದಾಖಲೆಯು ಸಮುದ್ರ ಮಟ್ಟದಿಂದ 1,600 ಮೀಟರ್ ಎತ್ತರದಲ್ಲಿ ಪಿಂಗ್ಕ್ಸಿಯಾಂಗ್‌ನ ಮೌಂಟ್ ವುಗಾಂಗ್‌ನಲ್ಲಿರುವ ಗುವಾನಿಂಡಾಂಗ್ ಕ್ಯಾಂಪ್‌ನಲ್ಲಿ ನಡೆಯಿತು. ಒಂದು ನಿಮಿಷ 14.198 ಸೆಕೆಂಡ್‌ಗಳಲ್ಲಿ ಶಿ ಹೈಲಿನ್ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಾಧಿಸಿರುವ ವೀಡಿಯೊ ವೈರಲ್ ಆಗಿದೆ.