ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಬಾಲಕನೊಬ್ಬ ಜೋಕಾಲಿ ಆಡುವ ವೇಳೆ ಹಗ್ಗ ಕುತ್ತಿಗೆಗೆ ಸಿಲುಕಿ ಮೃತಪಟ್ಟಿದ್ದಾನೆ.
ಉಯ್ಯಾಲೆಯ ಹಗ್ಗ ಸುರುಳಿ ಸುತ್ತುತ್ತಾ ಬಾಲಕನ ಕುತ್ತಿಗೆಗೆ ಸುತ್ತಿದೆ. 10 ವರ್ಷದ ಬಾಲಕ ಆದಿಲ್ಗೆ ಅದನ್ನು ಬಿಡಿಸಲು ಆಗಿಲ್ಲ. ನಂತರ ಆತ ವಾಂತಿ ಮಾಡಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಕ್ಕಳು ಎಷ್ಟೇ ದೊಡ್ಡವರಾದರೂ ಅಪಾಯ ತಪ್ಪಿದ್ದಲ್ಲ, ಮಕ್ಕಳ ಮೇಲೆ ಇನ್ನಷ್ಟು ಗಮನ ಇಡಿ, ಮಕ್ಕಳು ಯಾವುದೇ ಕೆಲಸ ಮಾಡುವಾಗಲೂ ಯಾರಾದರೂ ದೊಡ್ಡವರು ಅವರ ಮೇಲೆ ಕಣ್ಣಿಡುವುದು ಒಳಿತು.