ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಟ್ರಾವಿಸ್ ಶತಕ, ಸ್ಮಿತ್ 95 ರನ್, ಆಸ್ಟ್ರೇಲಿಯಾ 327/3

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮೊದಲ ದಿನ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ ಅಬ್ಬರಕ್ಕೆ ಆಸ್ಟ್ರೇಲಿಯಾ ಉತ್ತಮ ರನ್
ಕಲೆಹಾಕಿದೆ.

ಟೀಂ ಇಂಡಿಯಾ ಪ್ರಮುಖ ಮೂರ ವಿಕೆಟ್ ಕಬಳಿಸಿದರೂ .ಟ್ರಾವಿಸ್ ಹೆಡ್ ಆಕರ್ಷಕ ಸೆಂಚುರಿ ಸಿಡಿಸಿದರೆ, ಸ್ಟೀವ್ ಸ್ಮಿತ್ ಅಜೇಯ 95 ರನ್ ಮೂಲಕ ಅಬ್ಬರಿಸಿದ್ದಾರೆ. ಇದರ ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 327 ರನ್ ಸಿಡಿಸಿದೆ.

ಟಾಸ್ ಗೆದ್ದ ಟೀಂ ಇಂಡಿಯಾ , ಆಸೀಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಆಸ್ಟ್ರೇಲಿಯಾದ ಆರಂಭದಲ್ಲೇ ಉಸ್ಮಾನ್ ಖವಾಜ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಓವಲ್ ಮೈದಾನದ ಪಿಚ್ ಕಂಡೀಷನ್ ಲಾಭ ಪಡೆದುಕೊಂಡ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಬುಶಾನೆ ಜೊತೆಯಾಟದಿಂದ ಆಸೀಸ್ ಚೇತರಿಸಿಕೊಂಡಿತು.

ಡೇವಿಡ್ ವಾರ್ನರ್ 43 ರನ್ ಸಿಡಿಸಿ ಔಟಾದರು. ಮಾರ್ನಸ್ ಲಬುಶಾನೆ 26 ರನ್ ಸಿಡಿಸಿ ಔಟಾದರು.ಆ ಬಳಿಕ ಸ್ಟೀವನ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಜೊತೆಯಾಟಕ್ಕೆ ಟೀಂ ಇಂಡಿಯಾ ಸುಸ್ತಾಯಿತು.

ಟ್ರಾವಿಸ್ ಹೆಡ್ ಹಾಗೂ ಸ್ಮಿತ್ ಹೋರಾಟದಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಹೆಡ್ ಆಕರ್ಷಕ ಸೆಂಚುರಿ ಸಿಡಿಸಿ ಮಿಂಚಿದರು.. ದಿನದಾಟದ ಅಂತ್ಯದಲ್ಲಿ ಹೆಡ್ ಅಜೇಯ 146 ರನ್ ಸಿಡಿಸಿದರೆ. ಸ್ಮಿತ್ ಅಜೇಯ 95 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಹೆಡ್ ಹಾಗೂ ಸ್ಮಿತ್ ಹೋರಾಟದಿಂದ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 327 ರನ್ ಸಿಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!