Monday, October 2, 2023

Latest Posts

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ | ಭರ್ಜರಿ ತಯಾರಿ ನಡೆಸಿದೆ ರೋಹಿತ್ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಡಬ್ಲೂಟಿಸಿ 2023 ಫೈನಲ್ಸ್‌ಗೆ ಚಾಲನೆ ದೊರೆಯಲಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.

ಬಹುನಿರೀಕ್ಷಿತ ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ರೋಹಿತ್ ಪಡೆ ಭರ್ಜರಿ ತಯಾರಿ ನಡೆಸಿದೆ.

ಈಗಾಗಲೇ ಉಭಯ ತಂಡಗಳು ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನವನ್ನು ತಲುಪಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಫೈನಲ್ ಪಂದ್ಯಕ್ಕೆ ಹೈ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

ಲಂಡನ್‌ನಲ್ಲಿ ಜಸ್ಟ್ ಸ್ಟಾಪ್ ಆಯಿಲ್ ಕಾರ್ಯಕರ್ತರು ಯುಎಸ್‌ನಾದ್ಯಂತ ಕ್ರೀಡಾಕೂಟಗಳಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಪಂದ್ಯಕ್ಕೆ ಅಡ್ಡಿಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!