ಸಂರಕ್ಷಾ ತಲಸ್ಸೆಮಿಯಾ ಆರೈಕೆ ಕೇಂದ್ರದಲ್ಲಿ ವಿಶ್ವ ತಲಸ್ಸೆಮಿಯಾ ದಿನಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಸಂರಕ್ಷಾ ತಲಸ್ಸೆಮಿಯಾ ಆರೈಕೆ ಕೇಂದ್ರದಲ್ಲಿ ವಿಶ್ವ ತಲಸ್ಸೆಮಿಯಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಮಾತನಾಡುತ್ತಾ ರಾಷ್ಟ್ರೋತ್ಥಾನದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸೇವೆಗಳು ಉಳಿದೆಲ್ಲ ಸಂಸ್ಥೆಗಳಿಗೆ ಆದರ್ಶಪ್ರಾಯವಾಗಿರುವುದನ್ನು ನೆನಪಿಸಿಕೊಂಡರು. ತಲಸ್ಸೆಮಿಯಾ ಬಾಧಿತ ಮಕ್ಕಳ ಪೋಷಕರು ಕೊರಗುವುದನ್ನು ಬಿಟ್ಟು, ಈ ರೀತಿಯ ಮಕ್ಕಳ ಸೇವೆ ಮಾಡುವ ಅವಕಾಶ ಭಗವಂತ ಒದಿಗಿಸಿದ್ದಾನೆಂದು ಹೆಮ್ಮೆಪಡಬೇಕು ಎಂದು ಹೇಳಿದರು.

ಪ್ರಾಚಾರ್ಯ ಪ್ರೊ. ರಾಮಚಂದ್ರ ಶೆಟ್ಟಿ ಮಾತನಾಡಿ, ತಲಸ್ಸೆಮಿಯಾ ಎಂಬುದು ಭಾರೀ ಅಪಾಯದ ಕಾಯಿಲೆ ಏನಲ್ಲ. ಕೆಂಪುರಕ್ತಕಣ ಬೇಕಷ್ಟು ಉತ್ಪತ್ತಿಯಾಗದಿರುವ ಈ ಕಾಯಿಲೆಯು ಅಪರೂಪ ಕಾಯಿಲೆಯಾಗಿದೆ. ಹಾಗಾಗಿ ಇದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲದಿರುವುದರಿಂದ ರಕ್ತಪೂರಣ, ಐರನ್ ಕಿಲೇಷನ್ ಥೆರಪಿ ಹಾಗೂ ಕೆಲವಾರು ಔಷಧೋಪಚಾಗಳನ್ನು ಮಾಡುವುದು ಅನಿವಾರ್ಯ. ಅದರ ಜೊತೆಗೆ ತಲಸ್ಸೆಮಿಯಾ ಬಾಧಿತ ಮಕ್ಕಳು ಸಂತೋಷದಿಂದ ಇರುವ ಅವಕಾಶವನ್ನು ಹೆಚ್ಚು-ಹೆಚ್ಚು ಕಲ್ಪಿಸುವುದು ಹಾಗೂ ಆಯುರ್ವೇದದ ಕೆಲವು ರಸಾಯನಗಳನ್ನು ನೀಡಿದರೆ ಚಿಕಿತ್ಸೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಸೃಜನಶೀಲ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದೂ ಬಹಳ ಪ್ರಯೋಜನಕ್ಕೆ ಬರುತ್ತದೆ ಎಂದರು.

ರಾಷ್ಟ್ರೋತ್ಥಾನ ಪರಿಷತ್ ಕೆಲವಾರು ವರ್ಷಗಳಿಂದ ನಡೆಸುತ್ತಿರುವ ಸಂರಕ್ಷಾ ತಲಸ್ಸೆಮಿಯಾ ಆರೈಕೆ ಕೇಂದ್ರದಲ್ಲಿ 400 ಹೆಚ್ಚಿನ ಮಕ್ಕಳು ರಕ್ತಪೂರಣ ಹಾಗೂ ಇನ್ನುಳಿದ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಇನ್ನಾರಿಗಾದರೂ ಆರೈಕೆಯ ಅಗತ್ಯವಿದ್ದಲ್ಲಿ 94483 96110 ಸಂಖ್ಯೆಗೆ ಸಂಪರ್ಕಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!