ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನ ಮಿಯಾಜಾಕಿ ವಿಮಾನ ನಿಲ್ದಾಣದ ರನ್‌ವೇ ಬಳಿ ಎರಡನೇ ಮಹಾಯುದ್ಧದ ಕಾಲದ ಬಾಂಬ್ ಸ್ಫೋಟಗೊಂಡಿದ್ದು, ಇದರಿಂದಾಗಿ 87 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
ಯುದ್ಧದ ಸಮಯದಲ್ಲಿ, ಅಮೆರಿಕವು ವಾಯುದಾಳಿಗಳನ್ನು ನಡೆಸಿತ್ತು. ಬಾಂಬ್ ನಿಷ್ಕ್ರಿಯ ತಂಡವು ಸ್ಫೋಟಗೊಳ್ಳದ ಬಾಂಬ್‌ಗಳನ್ನು ನೆಲದಲ್ಲಿ ಹೂತು ಹಾಕಿತ್ತು. ಅದು ಈಗ ಸ್ಫೋಟ ಸಂಭವಿಸಿದೆ ಎಂದು ಜಪಾನ್ ಸಾರಿಗೆ ಸಚಿವಾಲಯ ದೃಢಪಡಿಸಿದೆ.
ಸ್ಫೋಟದ ಪರಿಣಾಮವಾಗಿ, ರನ್‌ವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿ ರೂಪುಗೊಂಡಿತು. ಈ ಕಾರಣಕ್ಕಾಗಿ ಅಧಿಕಾರಿಗಳು ರನ್‌ವೇಯನ್ನು ಮುಚ್ಚುವಂತೆ ಆದೇಶಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ