3ನೇ ಮಹಾಯುದ್ಧ ನಡೆದಿಲ್ಲವೆಂದರೆ ಅದಕ್ಕೆ ಪ್ರಧಾನಿ ಮೋದಿ ಕಾರಣ: ಕಂಗನಾ ರಣಾವತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಜಗತ್ತಿನಲ್ಲಿ 3ನೇ ಮಹಾಯುದ್ಧ ನಡೆದಿಲ್ಲವೆಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) ಹೇಳಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಉಕ್ರೇನ್‌ನ ಜನರು ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಪಡೆಯುತ್ತಿದ್ದಾರೆ . ಈ ಮೂಲಕ ಮಹಾಯುದ್ಧ ನಡೆಯದಂತೆ ಅವರೇ ತಡೆದಿದ್ದಾರೆ ಎಂದು ಹೇಳಿದ್ದಾರೆ.

ವ್ಲಾಡಿಮಿರ್ ಪುಟಿನ್‌ನಿಂದ ಉಕ್ರೇನ್‌ನ ಜನರವರೆಗೆ ತಮಗೆ ಮಾರ್ಗದರ್ಶನ ನೀಡಲು ಅವರನ್ನು ಮೋದಿಯವರನ್ನು ಎದುರು ನೋಡುತ್ತಿದ್ದಾರೆ. ಬಹುಶಃ ಇದು 3ನೇ ಮಹಾಯುದ್ಧ ನಡೆಯದಿರಲು ಒಂದು ಕಾರಣವಾಗಿರಬಹುದು ಎಂದು ಕಂಗನಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!