ವಿಶ್ವದ ಅತ್ಯಂತ ಹಿರಿಯ ಮಹಿಳೆ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಅತ್ಯಂತ ಹಿರಿಯ ಮಹಿಳೆ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಅವರು ತಮ್ಮ 119ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಈ ಬಗ್ಗೆ ಕ್ಯಾಥರೀನ್ ಲೇಬರ್ ನರ್ಸಿಂಗ್ ಹೋಮ್‌ನ ವಕ್ತಾರ ಡೇವಿಡ್ ತವೆಲ್ಲಾ ಮಾಹಿತಿ ನೀಡಿದ್ದು, ಸಿಸ್ಟರ್ ಆಂಡ್ರೆ ಅವರು ನಿಧನರಾಗಿದ್ದಾರೆ. 1908ರಂದು ದಕ್ಷಿಣ ಫ್ರಾನ್ಸ್‌ನಲ್ಲಿ ಮೊದಲ ಮಹಾಯುದ್ಧದ ಆರಂಭಕ್ಕೂ ಒಂದು ದಶಕ ಮುನ್ನ ಜನಿಸಿದ್ದರು ಎಂದು ಹೇಳಿದ್ದಾರೆ.

ಟೌಲೋನ್‌ನಲ್ಲಿನ ನರ್ಸಿಂಗ್ ಹೋಂನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪ್ರೀತಿಯ ಸಹೋದರರನ್ನು ಮತ್ತೊಂದು ಲೋಕದಲ್ಲಿ ಸೇರಬೇಕು ಎಂದು ಅವರು ಸದಾ ಹೇಳುತ್ತಿದ್ದರು.

119 ವರ್ಷದ ಜಪಾನ್‌ನ ಕೇನ್ ತನಕಾ ಅವರ ಮರಣಕ್ಕೂ ಮೊದಲು ಲುಸಿನ್ ರಾಂಡನ್ ಅತ್ಯಂತ ಹಿರಿಯ ಯುರೋಪಿಯನ್ ಎಂದು ಕರೆಯಲ್ಪಡುತ್ತಿದ್ದರು. ಕೇನ್ ನಿಧನದ ಬಳಿಕ ಭೂಮಿಯ ಮೇಲೆ ಬದುಕಿರುವ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!