ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬುಧಾಬಿಯಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಹಿಂದೂ ಮಂದಿರ ಇಂದು ಲೋಕಾರ್ಪಣೆಯಾಗಲಿದೆ.
ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ನಿರ್ಮಿಸಿರುವ ವಿಸ್ತಾರವಾದ ಹಿಂದೂ ದೇಗುಲವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿ ಇಂದಿನಿಂದ ಎರಡು ದಿನ ಅರಬ್ ಪ್ರವಾಸ ಕೈಗೊಂಡಿದ್ದು, ಇಂದು ದೇಗುಲ ಲೋಕಾರ್ಪಣೆಡ ಮಾಡಲಿದ್ದಾರೆ. ಈ ವರ್ಷದಲ್ಲಿ ಅತಿ ಸಂಭ್ರಮದಿಂದ ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಮಾಡಲಾಯಿತು. ಇದೀಗ ಮುಸ್ಲಿಮರ ನೆಲದಲ್ಲಿ ಮೊಟ್ಟ ಮೊದಲ ಐತಿಹಾಸಿಕ ಹಿಂದೂ ದೇವಾಯಲ ಲೋಕಾರ್ಪಣೆಯಾಗಲಿದೆ. ಇದು ಪಶ್ಚಿಮ ಏಷ್ಯಾದ ಅತಿದೊಡ್ಡ ದೇಗುಲವಾಗಲಿದೆ.
27 ಎಕರೆ ಭೂಮಿಯಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು, ಅಬುಧಾಬಿಯಲ್ಲಿ ಕಲ್ಲಿನಿಂದ ನಿರ್ಮಾಣವಾದ ಮೊದಲ ಹಿಂದೂ ದೇಗುಲವಾಗಿದೆ. ಮಾರ್ಚ್‌ನಿಂದ ಸಾರ್ವಜನಿಕರಿಗೆ ದೇಗುಲ ತೆರೆಯಲಾಗುತ್ತದೆ.