ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸ್‌ಕ್ರೀಂ ಅಂದ್ರೆ ಯಾರಿಗಿಷ್ಟ ಇಲ್ಲ? ಐಸ್‌ಕ್ರೀಂ ರುಚಿ ಚೆನ್ನಾಗಿದ್ರೆ ಅದನ್ನೇ ತಿನ್ನಬೇಕು ಅಂತ ಹುಡುಕಿ ಹುಡುಕಿ ಗಂಟೆಗಟ್ಟಲೆ ಟ್ರಾವೆಲ್ ಮಾಡೋರೂ ಇದ್ದಾರೆ. ವಿಶ್ವಾದ್ಯಂತ ವಿಭಿನ್ನವಾದ ಐಸ್‌ಕ್ರೀಂಗಳಿವೆ, ಎಲ್ಲದರದ್ದೂ ಅದರದ್ದೇ ಆದ ಸ್ಪೆಶಲ್ ಟೇಸ್ಟ್. ಇದೀಗ ವಿಶ್ವದ ಟಾಪ್ 100 ಐಕಾನಿಕ್ ಐಸ್‌ಕ್ರೀಮ್‌ಗಳ ಪಟ್ಟಿ ರಿಲೀಸ್ ಆಗಿದ್ದು, ನಮ್ಮ ಕರ್ನಾಟಕದ ಎರಡು ಐಸ್‌ಕ್ರೀಂಗಳು ಸ್ಥಾನ ಪಡೆದುಕೊಂಡಿವೆ.
View this post on Instagram
ಆನ್‌ಲೈನ್ ಟ್ರಾವೆಲ್ ಮತ್ತು ಫುಡ್ ಗೈಡ್ ʼಟೇಸ್ಟ್ ಅಟ್ಲಾಸ್ʼ ವಿಶ್ವದ ಟಾಪ್ 100 ಐಕಾನಿಕ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ನಮ್ಮ ಕರ್ನಾಟಕದ ಮಂಗಳೂರಿನ ಐಡಿಯಲ್ ಪಬ್ಬಾಸ್‌ನ ಫೇಮಸ್ ಐಸ್‌ಕ್ರೀಮ್‌ಗಳಲ್ಲಿ ಒಂದಾದ ಗಡ್‌ಬಡ್ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಈ ಲಿಸ್ಟ್‌ನಲ್ಲಿ ಬೆಂಗಳೂರಿನ ಕಾರ್ನರ್ ಹೌಸ್‌ನ ಡೆತ್ ಬೈ ಚಾಕೊಲೇಟ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದೆ.
ವಿಶ್ವದ ಟಾಪ್ 100 ಪಟ್ಟಿಯಲ್ಲೇ ನಮ್ಮ ರಾಜ್ಯದ ಐಸ್‌ಕ್ರೀಮ್‌ಗಳು ಬಂದಾಯ್ತು, ಮತ್ಯಾಕೆ ತಡ, ಇಂದೇ ಈ ಐಸ್‌ಕ್ರೀಂಗಳನ್ನು ಟ್ರೈ ಮಾಡಿ ನೋಡಿ..