September 28, 2026
Monday, September 28, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 102 | ಸಾಂಪ್ರದಾಯಿಕ ರುಚಿಗೆ ಮಾಡರ್ನ್ ಟ್ವಿಸ್ಟ್.. ಟ್ರೈ ಮಾಡಿ ‘ಮಸಾಲಾ ಓಟ್ಸ್ ಕಿಚಡಿ’ ರೆಸಿಪಿ

ಬೇಕಾಗುವ ಸಾಮಗ್ರಿಗಳು:

ಓಟ್ಸ್

ಹೆಸರು ಬೇಳೆ

ಕ್ಯಾರೆಟ್, ಬೀನ್ಸ್, ಬಟಾಣಿ

ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ

ಸಾಸಿವೆ, ಜೀರಿಗೆ, ಇಂಗು, ಕರಿಬೇವು, ತುಪ್ಪ

ಅರಿಶಿನ, ಖಾರದ ಪುಡಿ, ಗರಂ ಮಸಾಲಾ, ಉಪ್ಪು

ಮಾಡುವ ವಿಧಾನ:

ಮೊದಲು ನೆನೆಸಿದ ಹೆಸರು ಬೇಳೆಯನ್ನು ಪ್ರೆಷರ್ ಕುಕ್ಕರ್‌ನಲ್ಲಿ 2 ವಿಷಲ್ ಕೂಗಿಸಿ ಮೆತ್ತಗೆ ಬೇಯಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ 1 ಸ್ಪೂನ್ ತುಪ್ಪ ಕಾಯಿಸಿ, ಸಾಸಿವೆ, ಜೀರಿಗೆ, ಇಂಗು, ಕರಿಬೇವು ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಈಗ ಟೊಮೆಟೊ ಹಾಗೂ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಹಾಕಿ, ಅರಿಶಿನ, ಖಾರದ ಪುಡಿ, ಉಪ್ಪು ಸೇರಿಸಿ 3-4 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ತರಕಾರಿ ಬೆಂದ ಮೇಲೆ 1 ಕಪ್ ಓಟ್ಸ್ ಹಾಕಿ 1 ನಿಮಿಷ ಹುರಿಯಿರಿ. ನಂತರ 2-3 ಕಪ್ ನೀರು ಹಾಗೂ ಮುಂಚಿತವಾಗಿ ಬೇಯಿಸಿದ ಹೆಸರು ಬೇಳೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ತಟ್ಟೆ ಮುಚ್ಚಿ 5 ನಿಮಿಷ ಬೇಯಿಸಿ. ಕೊನೆಯಲ್ಲಿ ಸ್ವಲ್ಪ ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿದರೆ ಘಮಘಮಿಸುವ, ಬಿಸಿಬಿಸಿಯಾದ ಓಟ್ಸ್ ಕಿಚಡಿ ರೆಡಿ!

Must Read