ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಬೆನ್ನಲ್ಲೇ ನಾವು ಭಯೋತ್ಪಾದನಾ ಸಂಘಟನೆಯನ್ನು ಬೆಂಬಲಿಸಿದ್ದೇವೆ ಎಂದು ಪಾಕಿಸ್ತಾನ ಇದೀಗ ಅಧಿಕೃತವಾಗಿ ಒಪ್ಪಿಕೊಂಡಿದೆ.
ಹೌದು, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸುವುದು ಮತ್ತು ಬೆಂಬಲಿಸುವುದು ಸೇರಿದಂತೆ ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಪಾಕಿಸ್ತಾನ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಹಾಗಿದ್ರೆ ಸಚಿವ ಖ್ವಾಜಾ ಆಸಿಫ್ ಹೇಳಿದ್ದೇನು? “3 ದಶಕಗಳಿಂದ ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಶ್ಚಿಮ ದೇಶಗಳಿಗಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ. ನಾವು ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು ನಂತರ 9/11 ರ ನಂತರದ ಯುದ್ಧದಲ್ಲಿ ಸೇರದಿದ್ದರೆ ಪಾಕಿಸ್ತಾನದ ಮೇಲೆ ಈ ಆರೋಪ ಬರುತ್ತಿರಲಿಲ್ಲ. ಪಹಲ್ಗಾಮ್ ಘಟನೆಯ ನಂತರ ಭಾರತದೊಂದಿಗೆ ಯುದ್ಧ ನಡೆಸುವ ಸಾಧ್ಯತೆಯಿದೆ. ಭಾರತದ ಪ್ರತಿಕ್ರಿಯೆಗೆ ಸರಿಯಾದ ಪ್ರತಿಕ್ರಿಯೆಯನ್ನು ನಾವು ನೀಡುತ್ತೇವೆ” ಎಂದು ಹೇಳುವ ಮೂಲಕ ಮತ್ತೊಮ್ಮೆ ಪಾಪಿ ಪಾಕಿಸ್ತಾನ ತನ್ನ ದುಷ್ಟ ಬುದ್ದಿಯನ್ನು ಅನಾವರಣಗೊಳಿಸಿದೆ.