ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿ ಚಾಂಪಿಯನ್ ಆರ್‌ಸಿಬಿ WPL ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ನಿನ್ನೆ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆರ್ ಸಿಬಿ 12 ರನ್ ಗಳ ಸೋಲು ಕಂಡಿದೆ.
ಇಲ್ಲಿಯವರೆಗೆ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಸೋಲುಂಡ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದ ಯುಪಿ ವಾರಿಯರ್ಸ್, 8 ಪಂದ್ಯಗಳಲ್ಲಿ 3ನೇ ಗೆಲುವಿನೊಂದಿಗೆ ಆಟ ಕೊನೆಗೊಳಿಸಿದೆ.
ಮೊದಲು ಬ್ಯಾಟ್ ಮಾಡಿದ ಯುಪಿ 5 ವಿಕೆಟ್‌ಗೆ 225 ರನ್ ಕಲೆಹಾಕಿತು. ದಾಖಲೆಯ ಗುರಿ ಬೆನ್ನತ್ತಿದ ಆರ್‌ಸಿಬಿ, ಸ್ಫೋಟಕ ಆರಂಭದ ಹೊರತಾಗಿಯೂ 213 ರನ್ ಗಳಿಸಿ ಯುಪಿ ವಾರಿಯರ್ಸ್ ತಲೆ ಬಾಗಿಸಿತು.
ಯುಪಿ ತಂಡ 5 ವಿಕೆಟ್‌ಗೆ 225 ರನ್ ಗಳಿಸಿತು. ಇದು WPL ನಲ್ಲೇ ಗರಿಷ್ಠ. 2023ರಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ 2 ವಿಕೆಟ್‌ಗೆ 223 ರನ್ ಗಳಿಸಿದ್ದು ಈ ವರೆಗಿನ ದಾಖಲೆ.