WPL | ಸ್ಟೇಡಿಯಂನಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ: ಸ್ಮೃತಿ ಮಂದಾನ ಆರ್ಭಟಕೆ ಫ್ಯಾನ್ಸ್ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 195 ರನ್ ಚೇಸ್ ಮಾಡಲು ಮಂಧಾನ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ.

ಸೋಫಿ ಡಿವೈನ್ ಅವರೊಂದಿಗೆ 77 ರನ್‌ಗಳ ಜೊತೆಯಾಟದೊಂದಿಗೆ ಸ್ಫೋಟಕ ಆರಂಭವನ್ನು ಪಡೆದ ಕ್ಯಾಪ್ಟನ್ ಸ್ಮೃತಿ ಈ ಲೀಗ್ ನ ಮೊದಲ ಅರ್ಧಶತಕವನ್ನೂ ಗಳಿಸಿದರು. ಸ್ಮೃತಿ 43 ಎಸೆತಗಳಲ್ಲಿ 74 ರನ್ ಗಳಿಸಿದರು. ಈ ಪಂದ್ಯವನ್ನು 172.09 ಸ್ಟ್ರೈಕ್ ರೇಟ್‌ನೊಂದಿಗೆ ಆಡಿ, 3 ಸಿಕ್ಸರ್ ಹಾಗೂ 10 ಬೌಂಡರಿಗಳನ್ನು ಭರ್ಜರಿಯಾಗಿ ಸಿಡಿಸಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಂತೂ ಕ್ಯಾಪ್ಟನ್ ಆಟ ನೋಡಿ ಫುಲ್ ಫಿದಾ ಆಗಿದ್ದಾರೆ. ಆದರೆ, ಪಂದ್ಯದಲ್ಲಿ ಬೆಂಗಳೂರು ತಂಡ ಸೋತಿದ್ದು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 194 ರನ್ ಗಳಿಸಿದರೆ, ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 169 ರನ್ ಗಳಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!